ರಾಜ್ಯದಲ್ಲಿ ಮತ್ತೆ ಸಂಚಾರ ಆರಂಭಿಸಿದ ತಮಿಳುನಾಡು ಬಸ್ ಗಳು

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕ-ತಮಿಳುನಾಡು ರಾಜ್ಯಗಳ ಮಧ್ಯೆ ಉಂಟಾಗಿರುವ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ್ದ ತಮಿಳುನಾಡು...
ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಿಂತಿರುವ ತಮಿಳುನಾಡು ರಾಜ್ಯದ ಬಸ್ ಗಳು
ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಿಂತಿರುವ ತಮಿಳುನಾಡು ರಾಜ್ಯದ ಬಸ್ ಗಳು
Updated on: 

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕ-ತಮಿಳುನಾಡು ರಾಜ್ಯಗಳ ಮಧ್ಯೆ ಉಂಟಾಗಿರುವ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ್ದ ತಮಿಳುನಾಡು ಬಸ್ ಗಳು ಇದೀಗ ಮತ್ತೆ ಎಂದಿನಂತೆ ತಮ್ಮ ಸೇವೆಯನ್ನು ಆರಂಭಿಸಿವೆ.

ತಮಿಳುನಾಡು ರಾಜ್ಚ ರಸ್ತೆ ಸಾರಿಗೆ ನಿಗಮದ ಬಸ್ ಗಳು ನಿನ್ನೆಯಿಂದಲೇ ನಗರದಕ್ಕೆ ಆಗಮಿಸುತ್ತಿದ್ದು, ಎಂದಿನಂತೆ ತನ್ನ ಸೇವೆಯನ್ನು ಆರಂಭಿಸಿವೆ. ನಿನ್ನೆಯಿಂದಲೇ 481 ತಮಿಳುನಾಡು ಬಸ್ ಗಳು ರಾಜ್ಯದಲ್ಲಿ ಕಾರ್ಯಗಳನ್ನು ಆರಂಭಿಸಿವೆ.

ಕರ್ನಾಟಕ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿರುವುದರಿಂದ ತಮಿಳುನಾಡು ಬಸ್ ಗಳು ಮತ್ತೆ ಸೇವೆಯನ್ನು ಆರಂಭಿಸಿವೆ. ಮಂಡ್ಯ ಮತ್ತು ಮೈಸೂರಿಗೂ ಬಸ್ ಗಳನ್ನು ಬಿಡಲಾಗಿದೆ. ಮತ್ತೆ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಆಶಿಸುತ್ತೇವೆಂದು ಅಧಿಕಾರಿಗಳು ಹೇಳಿದ್ದಾರೆ.

ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರದಲ್ಲೂ ಕೆಎಸ್ಆರ್ ಟಿಸಿ ಬಸ್ ಗಳು ತನ್ನ ಕಾರ್ಯವನ್ನು ಆರಂಭಿಸಿದೆ. ಚೆನ್ನೈನಿಂದ ವೆಲ್ಲೂರು, ವೆಲ್ಲೂರಿನಿಂದ ಕೋಲಾರ ಮತ್ತು ಕೋಲಾರದಿಂದ ಹೊಸೂರು ಕಡೆಗೆ ಹೋಗುತ್ತಿದ್ದ ಬಸ್ ಗಳ ಮೇಲೆ ಈ ವರೆಗೂ ಯಾವುದೇ ರೀತಿಯ ಪರಿಣಾಮಗಳು ಬೀರಿಲ್ಲ. ಕಾವೇರಿ ಬಳಿಯಿದ್ದ ಕೆಲ ರಾಜ್ಯಗಳಿಗೆ ಮಾತ್ರ ಬಸ್ ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಚಲಿಸುವ ಬಸ್ ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಎಲ್ಲಾ ಬಸ್ ಗಳು ಎಂದಿನಂತೆ ತಮ್ಮ ಸೇವೆಗಳನ್ನು ಆರಂಭಿಸಿವೆ ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com