

ಬೆಂಗಳೂರು: ಪ್ರೀತಿಯ ನಾಯಿಮರಿಗಾಗಿ ಮದುವೆಯನ್ನೇ ನಿರಾಕರಿಸಿ ಬೆಂಗಳೂರಿನ ಕರಿಷ್ಮಾ ವಾಲಿಯಾ ಎಂಬುವರು ಇದೀಗ ಫೇಸ್ಬುಕ್ ಮತ್ತು ಟ್ವೀಟರ್ ಗಳಲ್ಲಿ ಹೀರೋಯಿನ್ ಎನಿಸಿದ್ದಾಳೆ.
ನಾವು ತೊಂದೆರೆಗೆ ಸಿಲುಕುವ ಸಾಧ್ಯತೆಗಳಿದ್ದಾಗ ನಾಯಿಗಳು ನಮ್ಮನ್ನು ಹೇಗೆ ತಪ್ಪಿಸುತ್ತವೆ ಎಂಬ ಸ್ಟೇಟಸ್ ನೊಂದಿಗೆ ಕರಿಷ್ಮಾ ತನ್ನ ಭಾವೀ ಪತಿಯೊಂದಿಗೆ ನಡೆಸಿರುವ ವಾಟ್ಸ್ ಆಪ್ ಮಾತುಕತೆಯ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.
ಈ ವಿಚಾರವಾಗಿ ಕರಿಷ್ಮಾಗೆ ಸಂದೇಶ ಕಳುಹಿಸಿರುವ ಭಾವೀ ಪತಿ ನಮ್ಮಿಬ್ಬರ ಪ್ರೀತಿಯ ನಡುವೆ ನಾಯಿಯೊಂದು ಅಡ್ಡ ಬರುವುದು ನನಗಿಷ್ಟವಿಲ್ಲ. ಅದರ ಜತೆಗೆ ಹಾಸಿಗೆ ಹಂಚಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ತಿಳಿಸಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕರಿಷ್ಮಾ ಈ ವಿಚಾರ ಮುಂದೆ ನಮ್ಮಿಬ್ಬರ ನಡುವೆ ಸಮಸ್ಯೆಗೆ ಕಾರಣವಾಗಬಹುದು. ಈಗಲೇ ನಾವಿಬ್ಬರೂ ದೂರವಾಗುವುದು ಉತ್ತಮ. ಯೊರೊಬ್ಬರಿಗಾಗಿ ನನ್ನ ನಾಯಿಯನ್ನು ತ್ಯಜಿಸಲು ಸಿದ್ಧಳಿಲ್ಲ ಎಂದಿದ್ದಾಳೆ. ಇದಕ್ಕೆ ಆತ ಹಾಗಿದ್ದರೆ ನೀನು ಆ ನಾಯಿಯನ್ನೇ ಮದುವೆಯಾಗು ಎಂಬ ಪ್ರತಿಕ್ರಿಯೆ ನೀಡಿದ್ದಾನೆ.