ಶಾಲಾ ಮಕ್ಕಳಿಗೆ ಶಾಕ್: ಈ ಬಾರಿ ದಸರಾ ರಜೆ ಕಡಿತ

ಸಾಲು ಸಾಲು ಮುಷ್ಕರ, ಪ್ರತಿಭಟನೆ, ಬಂದ್‌ಗಳಿಂದಾಗಿ ಈ ಬಾರಿಯ ದಸರಾ ರಜೆಯನ್ನು ಮೊಟಕು ಮಾಡಲು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಾಲು ಸಾಲು ಮುಷ್ಕರ, ಪ್ರತಿಭಟನೆ, ಬಂದ್‌ಗಳಿಂದಾಗಿ ಈ ಬಾರಿಯ ದಸರಾ ರಜೆಯನ್ನು ಮೊಟಕು ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ವಿದ್ಯಾರ್ಥಿಗಳ ಹಿತಕಾಯುವ ಉದ್ದೇಶದಿಂದ ಕೆಲ ಸರ್ಕಾರಿ ರಜಾ ದಿನಗಳಂದು ಕೂಡ ಶಾಲಾ– ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಜೊತೆಗೆ ದಸರಾ ರಜೆ ಅವಧಿಯನ್ನು 5 ದಿನ ಕಡಿತಗೊಳ್ಳಿಸಲು ಯೋಜಿಸಿದ್ದು,  ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಇದಕ್ಕೆ ಸಹಮತ ಸೂಚಿಸಿವೆ.

ವಿದ್ಯಾರ್ಥಿಗಳ ಪಠ್ಯವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ದಸರಾ ರಜೆಯ ಅವಧಿಯನ್ನು ಕಡಿತಗೊಳಿಸಿದೆ. ಈ ಮೊದಲು ಅಕ್ಟೋಬರ್‌ 8ರಿಂದ 27ರವರೆಗೆ ರಜೆ ನಿಗದಿಯಾಗಿತ್ತು. ಅದನ್ನು ಐದು ದಿನ ಕಡಿಮೆ ಮಾಡಲಾಗಿದೆ. ಅಕ್ಟೋಬರ್‌ 23ರಿಂದಲೇ ತರಗತಿಗಳು ಪುನರಾರಂಭಗೊಳ್ಳಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com