ಹುಬ್ಬಳ್ಳಿ : ದ.ರಾ.ಬೇಂದ್ರೆ ಪುತ್ರ ಡಾ. ವಾಮನ ಬೇಂದ್ರೆ ನಿಧನ

ವರಕವಿ ದ.ರಾ ಬೇಂದ್ರೆ ಅವರ ಪುತ್ರ ಡಾ.ವಾಮನ ಬೇಂದ್ರೆ (82) ಹುಬ್ಬಳ್ಳಿಯಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ, ದೀರ್ಘಕಾಲದ...
ವಾಮನ ಬೇಂದ್ರೆ
ವಾಮನ ಬೇಂದ್ರೆ
Updated on: 

ಹುಬ್ಬಳ್ಳಿ: ವರಕವಿ ದ.ರಾ ಬೇಂದ್ರೆ ಅವರ ಪುತ್ರ ಡಾ.ವಾಮನ ಬೇಂದ್ರೆ (82) ಹುಬ್ಬಳ್ಳಿಯಲ್ಲಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಮನ ಬೇಂದ್ರೆ, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶರ್ಮಾ ಕುಟೀರದಲ್ಲಿ ಪಾರ್ಥಿವ ಶರೀರವನ್ನುಇರಿಸಲಾಗಿದ್ದು, ಧಾರವಾಡದ ದ.ರಾ.ಬೇಂದ್ರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ವಾಮನ ಅವರು ಓರ್ವ ಪುತ್ರಿ ಸೇರಿದಂತೆ ಸಹೋದರಿಯನ್ನು ಅಗಲಿದ್ದಾರೆ. ಸಾರ್ವಜನಿಕ ದರ್ಶನ ಬಳಿಕ ಇಂದು ಸಂಜೆ ಧಾರವಾಡದ ಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ

ಸಾಹಿತಿ, ಪ್ರಾಧ್ಯಾಪಕರಾಗಿದ್ದ ವಾಮನಬೇಂದ್ರೆ 150ಕ್ಕೂ ಹೆಚ್ಚಿನ ಪ್ರಕಟಣೆಗಳನ್ನು ಮಾಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com