ನಿನ್ನೆ ನಡೆದಿದ್ದ ದಾಳಿಯ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಟಿ ಇಲಾಖೆ ಪ್ರಧಾನ ಆಯುಕ್ತೆ ನೂತನ ಒಡೆಯರ್ ಅವರು, ಆದಿಕೇಶವಲು ಗ್ರೂಪ್ ಆಫ್ ಕಂಪನೀಸ್ ಮೇಲೆ ದಾಳಿ ನಡೆಸಿದ ವೇಳೆ ದಾಖಲೆಗಳೇ ಇಲ್ಲದ 50 ಕೋಟಿ ರುಪಾಯಿ ಹಣ ಪತ್ತೆಯಾಗಿದೆ. ಡೊನೇಷನ್ ರೂಪದಲ್ಲಿ ಹಣ ಬಂದಿರುವುದು ತಿಳಿದು ಬಂದಿದೆ. ಹಾಗಾಗಿ ಡೊನೇಷನ್ ನೀಡಿದವರ ಆಸ್ತಿ, ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.