ನವೆಂಬರ್ ನಲ್ಲಿ ಜನಾರ್ದನ ರೆಡ್ಡಿ ಪುತ್ರಿ ವೈಭವೋಪೇತ ವಿವಾಹ: ಶಾರೂಕ್ ಖಾನ್, ಕತ್ರೀನಾ ಕೈಫ್ ಡ್ಯಾನ್ಸ್

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಸಂಭ್ರಮ ಮರುಕಳಿಸಿದೆ. ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹ ಆದ್ಧೂರಿಯಾಗಿ ನೆರವೇರಲಿದೆ....
ಜನಾರ್ದನ ರೆಡ್ಡಿ ,ಶಾರೂಖ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಸ್ಟೆಪ್ಸ್
ಜನಾರ್ದನ ರೆಡ್ಡಿ ,ಶಾರೂಖ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಸ್ಟೆಪ್ಸ್

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಸಂಭ್ರಮ ಮರುಕಳಿಸಿದೆ. ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ ವಿವಾಹ ಆದ್ಧೂರಿಯಾಗಿ ನೆರವೇರಲಿದೆ.

ಇತ್ತೀಚೆಗೆ ಬೆಂಗಳೂರಿನ ರೆಡ್ಡಿ ನಿವಾಸ ಪಾರಿಜಾತದಲ್ಲಿ ಹೈದರಾಬಾದ್ ಮೂಲದ ಉದ್ಯಮಿಯ ಪುತ್ರನೊಂದಿಗೆ ಬ್ರಹ್ಮಿಣಿ ನಿಶ್ಚಿತಾರ್ಥ ನೆರವೇರಿತ್ತು.

ನವೆಂಬರ್ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಭವೋಪೇತ ಮದುವೆ ಸಮಾರಂಭ ನಡೆಯಲಿದೆ. ಮದುವೆಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಸ್ಟೆಪ್ಸ್ ಹಾಕಲಿದ್ದಾರೆ ಅಂತ ಹೇಳಲಾಗಿದೆ. ಬಾಲಿವುಡ್ ಸ್ಟಾರ್ ಗಳು ಯಾರದೇ ಮದುವೆ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನ ನೀಡಿಲ್ಲ, ಆದರೆ ಗಾಲಿ ಜನಾರ್ಧನ ರೆಡ್ಡೆ ತಮ್ಮ ಮಗಳ ಮದುವೆಯಲ್ಲಿ ಪ್ರದರ್ಶನ ನೀಡುವಂತೆ ಕೋರಿದ್ದು, ಅದಕ್ಕಾಗಿ ಎಷ್ಟೇ ಹಣ ಕೇಳಿದರೂ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಬ್ರಹ್ಮಿಣಿ ಮದುವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಆಮಂತ್ರಣ ನೀಡಲಾಗುತ್ತಿದೆ. ಬಾಲಿವುಡ್, ಟಾಲಿವುಡ್ ನಟ ನಟಿಯರು, ಕೇಂದ್ರ ಸಚಿವರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಅಂತ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com