ಬೆಂಗಳೂರು:ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಮಂಡ್ಯ ಜಿಲ್ಲೆಯ ಇಬ್ಬರು ನಾಯಕರಾದ ಮಾಜಿ ಶಾಸಕರಾದ ಕಾಂಗ್ರೆಸ್ ನ ಎಲ್.ಆರ್. ಶಿವರಾಮೆ ಗೌಡ ಮತ್ತು ಸುರೇಶ್ ಗೌಡ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ನ ತತ್ವ, ಕ್ರಮಗಳಿಂದ ಬೇಸತ್ತು ಜೆಡಿಎಸ್ ಸೇರಿರುವುದಾಗಿ ಸುರೇಶ್ ಗೌಡ ತಿಳಿಸಿದರು. ನಾಗಮಂಗಲ ತಾಲ್ಲೂಕಿನಿಂದ ಮುಂದಿನ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಶಿವರಾಮೆ ಗೌಡ ಅವರನ್ನು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಸಾಧ್ಯತೆಯಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ನಾಯಕರ ಮಧ್ಯೆ ಯಾವುದೇ ಜಗಳಗಳು ಇರಬಾರದು. ಈ ಇಬ್ಬರೂ ನಾಯಕರು ಪ್ರಭಾವಶಾಲಿಗಳಾಗಿದ್ದು ಅವರ ಬೆಂಬಲಿಗರು ಪಕ್ಷದ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.