ಕೋಲಾರ: ಸಾಲಬಾಧೆಯಿಂದ ಬಾವಿಗೆ ಬಿದ್ದು ರೈತ ಆತ್ಮಹತ್ಯೆ

ಸಾಲಬಾಧೆಯಿಂದ ಬೇಸತ್ತ ರೈತನೊಬ್ಬ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಲ್ಲೆಯ ಹೀರೆಹಳ್ಳಿಯಲ್ಲಿ ನಡೆದಿದೆ. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಕೋಲಾರ: ಸಾಲಬಾಧೆಯಿಂದ ಬೇಸತ್ತ ರೈತನೊಬ್ಬ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ಜಲ್ಲೆಯ ಹೀರೆಹಳ್ಳಿಯಲ್ಲಿ ನಡೆದಿದೆ. 
ನಾರಾಯಣಪ್ಪ ಮೃತ ರೈತ, ಸಾಲ ಮರು ಪಾವತಿಸುವಂತೆ ಬುಧವಾರ ಬ್ಯಾಂಕ್ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ನಾರಾಯಣಪ್ಪ ಖಿನ್ನತೆಗೊಳಗಾಗಿ ಸಾವಿಗೆ ಶರಣಾಗಿದ್ದಾನೆ ಎಂದು ಕೋಲಾರ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ. 
ಬರಗಾಲದಿಂದಾಗಿ ಜಮೀನಿನನಲ್ಲಿ ಯಾವುದೇ ಬೆಳೆ ಬೆಳೆಯಲಾಗಲಿಲ್ಲ, ಹೀಗಾಗಿ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ನಾರಾಯಣಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
12 ಎಕರೆ ಜಮೀನು ಹೊಂದಿರುವ ನಾರಾಯಣಪ್ಪ 15 ಲಕ್ಷ ಕೃಷಿ ಸಾಲ ಮಾಡಿದ್ದರು. ಈ ಸಂಬಂಧ ಕೋಲಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com