ಚಾಮರಾಜಪೇಟೆ ದೇವಾಲಯದ ಬಳಿ ಇಂದಿರಾ ಕ್ಯಾಂಟಿನ್ ನಿರ್ಮಾಣ ರದ್ದುಗೊಳಿಸಿದ ಬಿಬಿಎಂಪಿ

ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕಾಗಿ ಚಾಮರಾಜಪೇಟೆಯ ದೇವಾಲಯದ ಗೋಡೆ ಧ್ವಂಸಗೊಳಿಸಿದ್ದಕ್ಕೆ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾದ ...
ಚಾಮರಾಜಪೇಟೆಯಲ್ಲಿನ ರಾಮೇಶ್ವರ ದೇವಾಲಯದ ಗೋಡೆ
ಚಾಮರಾಜಪೇಟೆಯಲ್ಲಿನ ರಾಮೇಶ್ವರ ದೇವಾಲಯದ ಗೋಡೆ
Updated on: 
ಬೆಂಗಳೂರು: ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕಾಗಿ ಚಾಮರಾಜಪೇಟೆಯ ದೇವಾಲಯದ ಗೋಡೆ ಧ್ವಂಸಗೊಳಿಸಿದ್ದಕ್ಕೆ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡದಿರಲು ಬಿಬಿಎಂಪಿ ನಿರ್ಧರಿಸಿದೆ. 
ಸೋಮವಾರ ಚಾಮರಾಜಪೇಟೆಯ ದೇವಾಲಯದ ಕಂಪೌಂಡ್ ಗೋಡೆಯನ್ನು ಒಡೆದ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದರು. 
ಮಂಗಳವಾರ  ಬೆಳಗ್ಗೆ ಮತ್ತಷ್ಟು ಮಂದಿ ಸೇರಿ ಬಿಬಿಎಂಪಿ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಆ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡದೇ ಇರಲು ನಿರ್ಧರಿಸಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ  ಇಂದಿರಾ ಕ್ಯಾಂಟಿನ್ ನಿರ್ಮಾಣ ಯೋಜನೆಯನ್ನು ಕೈಬಿಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಮಾಜಿ ಕೌನ್ಸಿಲರ್ ಚಂದ್ರಶೇಖರ್ ಹೇಳಿದ್ದಾರೆ. ಕೆಲವೇ ಕೆಲವು ಸಮಯದಲ್ಲಿ ಈ ಯೋಜನೆ ಕೈಗೊಂಡಿದ್ದರಿಂದ ಈ ಗೊಂದಲ ಸೃಷ್ಟಿಯಾಯಿತು. ದೇವಾಲಯದ ಸಮೀಪ  ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡುವ ಸಂಬಂಧ ಸ್ಥಳೀಯರ ಜೊತೆ ಚರ್ಚಿಸಲು ಸಾಕಷ್ಟು ಸಮಯ ಸಿಗಲಿಲ್ಲ. ಹೀಗಾಗಿ ಸ್ಥಳೀಯರು ಪ್ರತಿಭಟನೆಗೆ ಮುಂದಾದರು ಎಂದು ಅವರು ತಿಳಿಸಿದ್ದಾರೆ.
ಕೆಲಸ ಮಾಡುವ ಮೂರು ದಿನಗಳ ಹಿಂದಷ್ಟೇ ಯೋಜನೆಯ ಪ್ಲಾನ್ ಬಗ್ಗೆ  ಸ್ಥಳೀಯ ಪ್ರತಿನಿಧಿಗಳ ಜೊತೆ ಬಿಬಿಎಂಪಿ ಎಂಜಿನೀಯರ್ ತಿಳಿಸಿದರು. ಕ್ಯಾಂಟೀನ್ ಗಾಗಿ ಮತ್ತೊಂದು ಜಾಗವನ್ನು ಗುರುತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೇವಾಲಯಕ್ಕೆ ಹಾನಿಯಾಗಲು ಬಿಡುವುದಿಲ್ಲ, ಇಂದಿರಾ ಕ್ಯಾಂಟೀನ್ ಗಾಗಿ ಬೇರೆ ಜಾಗ ಗುರುತಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com