ಬೆಂಗಳೂರು: ಇಂದಿರಾ ಕ್ಯಾಂಟೀನ್ ಗಳಲ್ಲಿ ಸ್ಥಳೀಯ ಖಾದ್ಯಗಳಿಗೆ ಆದ್ಯತೆ

2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ಸ್ಥಳೀಯ ಖಾದ್ಯಗಳನ್ನು ಕಡಿಮೆ ಬೆಲೆಗೆ...
ಬನ್ನಪ್ಪ ಪಾರ್ಕ್ ಬಳಿಯ ಇಂದಿರಾ ಕ್ಯಾಂಟೀನ್
ಬನ್ನಪ್ಪ ಪಾರ್ಕ್ ಬಳಿಯ ಇಂದಿರಾ ಕ್ಯಾಂಟೀನ್
Updated on: 
ಬೆಂಗಳೂರು: 2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ಸ್ಥಳೀಯ ಖಾದ್ಯಗಳನ್ನು ಕಡಿಮೆ ಬೆಲೆಗೆ ಜನರಿಗೆ ನೀಡಲು ಸಿದ್ಧತೆ ನಡೆಸುತ್ತಿದೆ.
ತಮಿಳುನಾಡಿನಲ್ಲಿನ ಅಮ್ಮಾ ಕ್ಯಾಂಟೀನ್ ರೀತಿ ರಾಜ್ಯದ ಕ್ಯಾಂಟೀನ್ ಗಳಲ್ಲಿ 10 ರು.ಗೆ ಸ್ಥಳೀಯ ಆಹಾರ ನೀಡಲು ಬಯಸಿದೆ.
ಈ ಕ್ಯಾಂಟೀನ್ ಗಳಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಹಳೇಯ ಮೈಸೂರು ಭಾಗಗಲ್ಲಿ ರಾಗಿ ಮುದ್ದೆ, ಕರಾವಳಿ ಭಾಗದಲ್ಲಿ ಮೀನು ಸಾರು ಮತ್ತು ಅನ್ನ ನೀಡಲಿದೆ.
ಸಿಎಂ ಸಿದ್ದಾರಮಯ್ಯ ಅವರ ಮೆಚ್ಚಿನ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ಬೆಲೆಗೆ ಉತ್ತಮ ಆಹಾರ ನೀಡುವ ಉದ್ದೇಶವಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್ 15 ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿದೆ.
ಕ್ಯಾಂಟೀನ್ ನಿರ್ಮಾಣಕ್ಕಾಗಿ ನಾವು ತಮಿಳುನಾಡಿನ ಕೃಷ್ಣಗಿರಿಯಿಂದ ಕಾಂಕ್ರೀಟ್ ಚಪ್ಪಡಿಗಳನ್ನು ತರಿಸಿಕೊಂಡಿದ್ದೇವೆ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮೊದಲು ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದ್ದು, ನಂತರ ರಾಜ್ಯದ ಇತರ ಪ್ರದೇಶಗಳಲ್ಲಿ ಶೀಘ್ರವೇ ಆರಂಭಿಸಲಾಗುವುದು ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸ್ಥಳೀಯರ ಆಹಾರ ರುಚಿಗಳನ್ನು ಗಮನದಲ್ಲಿರಿಸಿಕೊಂಡು ಮೆನು ಸಿದ್ದಪಡಿಸಲಾಗುವುದು  ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಮೈಸೂರು ಮಂಡ್ಯ ಮತ್ತು ಹಾಸನ ಭಾಗಗಳ ರಾಗಿ ಮುದ್ದೆ ಮತ್ತು ಅನ್ನ, ಕರಾವಳಿ ತೀರದ ಭಾಗದ ಜನರ ಮೀನುಸಾರು ನೀಡಲಾಗುವುದು ಎಂದು ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ಕ್ಯಾಂಟೀನ್ ಆರಂಭಿಸಿ, ಶೀಘ್ರವೇ ರಾಜ್ಯದ ಇತರ ಭಾಗಗಳಲ್ಲೂ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸಲಿದೆ. ಗಾಂಧಿ ಜಯಂತಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕ್ಯಾಂಟೀನ್ ಆರಂಭವಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com