ರಾಜ್ಯ

ಬೆಂಗಳೂರು: ಕೇಸು ವಾಪಸ್ ಪಡೆಯುವಂತೆ ಪೊಲೀಸರಿಂದ ಒತ್ತಡ: ಮೃತ ಬಾಲಕಿ ಪೋಷಕರ ಆರೋಪ

ಬೆಂಗಳೂರು: ಕೇಸು ವಾಪಸ್ ಪಡೆಯುವಂತೆ ಪೊಲೀಸರಿಂದ ಒತ್ತಡ: ಮೃತ ಬಾಲಕಿ ಪೋಷಕರ ಆರೋಪ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಪೊಲೀಸರು ಕೇಸು ವಾಪಸ್ ಪಡೆಯಲು ಒತ್ತಡ ಹೇರುತ್ತಿದ್ದಾರೆ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ.

ಬನ್ನೇರುಘಟ್ಟ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಆದರೆ ಈಗ ಕೇಸು ಹಿಂಪಡೆಯುವಂತೆ ಪೊಲೀಸರು ಒತ್ತಾಯ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ಬಾಲಕಿ ತಾಯಿ ದೇವಿ ಆರೋಪಿಸಿದ್ದಾರೆ.

ಕಳೆದ ಶುಕ್ರವಾರ ಐದು ವರ್ಷದ ಬಾಲಕಿ ಶೇ.80 ರಷ್ಟು ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಳು, ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಳು. ನನ್ನ ಮಗಳ ಸಾವಿನ ನಂತರ ಎಷ್ಟು ಪರಿಹಾರ ಹಣ ಬೇಕು ಕೇಳು ಕೊಡುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೇ ಯಾವುದೇ ಕಾರಣಕ್ಕೂ ಕೇಸು ವಾಪಸ್ ಪಡೆಯುವುದಿಲ್ಲ ಎಂದು ದೇವಿ ತಿಳಿಸಿದ್ದಾರೆ.  

ನನ್ನ ಮಗಳನ್ನು ವಾಪಸ್ ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ, ನಮಗೆ ನ್ಯಾಯಬೇಕು, ಸತ್ಯ ಹೊರ ಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮೃತ ಬಾಲಕಿ ತಾಯಿ ಆಗ್ರಹಿಸಿದ್ದಾರೆ.

ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ, ಆದರೆ ಪೊಲೀಸರು ಇದೊಂದು ಆಕಸ್ಮಿಕ ಘಟನೆ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳುತ್ತಿದ್ದಾರೆ.  

ಕಳೆದ ಶುಕ್ರವಾರ ಎಂದಿನಿಂತೆ ಅಂಗನವಾಡಿಯಿಂದ ಬಂದ ಮಗಳು ನೆರೆಮನೆಯ ಮಗುವಿನೊಂದಿಗೆ ಆಟವಾಡಲು ಹೋಗಿದ್ದಳು. ಅಲ್ಲಿ ಎನಾಯಿತು ಎಂದು ನನಗೆ ಸರಿಯಾಗಿ ತಿಳಿದಿಲ್ಲ, ಸತೀಶ್ ಎಂಬಾತ ಬೆಂಕಿ ಕಡ್ಡಿ ಹಚ್ಚಿ ಆಕೆಯ ಮೇಲೆ ಎಸೆದಿದ್ದಾನೆ ಎಂದು ದೇವಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.