ಫೆಬ್ರವರಿ 9, 1934ರಲ್ಲಿ ಮೈಸೂರಿನಲ್ಲಿ ಜನಿಸಿದ್ದ ಮೈಸೂರು ಚನ್ನಬಸಪ್ಪ ಜಯದೇವ (ಮೈ.ಚ. ಜಯದೇವ್) ಬಿ.ಎಸ್ಸಿ. ಪದವಿ ಪೂರೈಸಿದ ನಂತರ ಕಾನೂನು ವ್ಯಾಸಂಗ ಮಾಡಿದ್ದರು. ಬೆಂಗಳೂರಿನ ಪ್ರತಿಷ್ಠಿತ HMT- Hindustan Garage Motors ನಲ್ಲಿಯೂ ಮ್ಯಾನೇಜರ್ ಆಗಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಜಯದೇವ್ ನಂತರದ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಧಾರೆಯತ್ತ ಆಕರ್ಷಿತರಾಗಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.