ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ: ಮತ್ತೋರ್ವ ಆರೋಪಿ ಬಂಧನ!

ಕಮ್ಮನಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪೊಲೀಸರು ಮತ್ತೊಬ್ಬ ಆರೋಪಿ ಜೇಮ್ಸ್‌ ಎಂಬಾತನನ್ನು ರಾಮಮೂರ್ತಿನಗರ ಸಮೀಪದ ಬಿ.ಚನ್ನಸಂದ್ರದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಕಮ್ಮನಹಳ್ಳಿಯಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪೊಲೀಸರು ಮತ್ತೊಬ್ಬ ಆರೋಪಿ ಜೇಮ್ಸ್‌ ಎಂಬಾತನನ್ನು ರಾಮಮೂರ್ತಿನಗರ ಸಮೀಪದ ಬಿ.ಚನ್ನಸಂದ್ರದಲ್ಲಿ ಗುರುವಾರ  ರಾತ್ರಿ ಬಂಧಿಸಿದ್ದಾರೆ.
 
ಚಿಕ್ಕಬಾಣಸವಾಡಿ ನಿವಾಸಿಯಾದ ಜೇಮ್ಸ್‌, ಆನ್‌ಲೈನ್ ವಹಿವಾಟು ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಆಗಿದ್ದು, ತನ್ನ ನಾಲ್ವರು ಸಹಚರರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆತ ಮನೆ ಬಿಟ್ಟು ಪರಾರಿಯಾಗಿದ್ದ.  ಸ್ಥಳೀಯರೊಬ್ಬರು ನೀಡಿದ್ದ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಪಪ್ಪಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕೂ ಪೊಲೀಸರು  ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತ ಜೇಮ್ಸ್ ಬಿ.ಚೆನ್ನಸಂದ್ರದಿಂದಲೂ ಕಾಲ್ಕೀಳಲು ಸಿದ್ಧತೆ ನಡೆಸಿದ್ದನಂತೆ ಆದರೆ ಹಣದ ಅಭಾವದಿಂದಾಗಿ ಆತ ಅಲ್ಲಿಯೇ ಉಳಿದುಕೊಂಡಿದ್ದ. ಆ ಬಳಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ.

ಪೊಲೀಸರು ತಿಳಿಸಿರುವಂತೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಲಿನೋ, ಅಯ್ಯಪ್ಪ, ಸುದೇಶ್, ಸೋಮಶೇಖರ್ ಮತ್ತು ಪಪ್ಪಿಗೆ ಇದೇ ಜೇಮ್ಸ್ ಹುಡಗರ ಗುಂಪಿಗೆ ಮದ್ಯ ತಂದು ನೀಡಿದ್ದ. ಆತನೇ ಹೇಳಿಕೊಂಡಿರುವಂತೆ 12  ಬಾಟಲ್ ಬಿಯರ್, ಒಂದು ದೊಡ್ಡ ಬಾಟಲ್ ರಮ್ ತಂದು ನೀಡಿದ್ದನಂತೆ. ಎಲ್ಲರೂ ಸಮೀಪದ ರಾಜ್ ಕುಮಾರ್ ಪಾರ್ಕ್ ನಲ್ಲಿ ಕುಳಿತು ಕಂಠಪೂರ್ತಿ ಕುಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಘಟನೆ ನಡೆದ ಬಳಿಕ  ಎಲ್ಲ ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ತಮ್ಮ ಮೊಬೈಲ್ ಗಳನ್ನು ರೀಸೆಟ್ ಮಾಡಿಕೊಂಡಿದ್ದರಂತೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿದ್ದ ಸಿಸಿಟಿವಿ ದೃಶ್ಯಾವಳಿಗಳ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೋ ರವಾನೆ ಮಾಡಿ ವಿಡಿಯೋ ಅಸಲೀಯದ್ದು ಎಂದು  ಖಚಿತಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com