ಬೆಂಗಳೂರು: ಪೇದೆ ಗರ್ಭಿಣಿ ಪತ್ನಿ ವಸತಿ ಸಮುಚ್ಛಯದಲ್ಲಿ ಆತ್ಮಹತ್ಯೆ

ಶಿವಾಜಿನಗರದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಕಾನ್‌ಸ್ಟೆಬಲ್‌ ಮಲ್ಲಿಕ್ ಮುಜಾವರ್ ಎಂಬುವರ ಗರ್ಭಿಣಿ ಪತ್ನಿ ನೇಣಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಶಿವಾಜಿನಗರದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಕಾನ್‌ಸ್ಟೆಬಲ್‌ ಮಲ್ಲಿಕ್ ಮುಜಾವರ್ ಎಂಬುವರ ಗರ್ಭಿಣಿ ಪತ್ನಿ ನೇಣಿಗೆ ಶರಣಾಗಿದ್ದಾರೆ.

ಜನವರಿ 24 ರಂದು ಅಫ್ಜಾನಾ (26) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಅಫ್ಜಾನಾ, ಶಿವಾಜಿನಗರ ಠಾಣೆ ಕಾನ್‌ಸ್ಟೆಬಲ್ ಮಲ್ಲಿಕ್ ಅವರನ್ನು ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು.

ದಂಪತಿ ನಡುವೆ ಜಗಳವಾಗಿದ್ದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಯ ತಾಯಿ ಮಲ್ಲಿಕ್ ವಿರುದ್ಧ ಕೇಸು ದಾಖಲಿಸಿದ್ದಾರೆ.

ಅಫ್ಸಾನಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದು, ಗರ್ಭಿಣಿಯಾಗಿದ್ದರು. ಮಲಿಕ್ ಗೆ ಗಂಡು ಮಗು ಬೇಕು ಎಂಬ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆದರೆ ಪೊಲೀಸರು ನಮಗೆ ವಂಚಿಸುತ್ತಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಇದೊಂದು ಆತ್ಮಹತ್ಯೆ ಪ್ರಕರಣವಾಗಿದ್ದು,  ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com