ಕರ್ನಾಟಕದಿಂದ ಕಾವೇರಿ ಮಲಿನ; ತಮಿಳುನಾಡಿನಿಂದ ಮತ್ತೆ ಕ್ಯಾತೆ

ಕಾವೇರಿ ನದಿ ನೀರು ವಿವಾದ ಕುರಿತಂತೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ತಮಿಳುನಾಡು, ಮತ್ತೊಮ್ಮೆ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದು ಕರ್ನಾಟಕದವರು ಕಾವೇರಿಯನ್ನು ಮಲಿನಗೊಳಿಸುತ್ತಿದ್ದಾರೆಂದು ಸುಪ್ರೀಂಕೋರ್ಟ್ ನಲ್ಲಿ ದೂರು ನೀಡಿದ್ದಾರೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಕಾವೇರಿ ನದಿ ನೀರು ವಿವಾದ ಕುರಿತಂತೆ ಪದೇ ಪದೇ ಕಾಲು ಕೆರೆದುಕೊಂಡು ಬರುತ್ತಿರುವ ತಮಿಳುನಾಡು, ಮತ್ತೊಮ್ಮೆ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದು ಕರ್ನಾಟಕದವರು ಕಾವೇರಿಯನ್ನು ಮಲಿನಗೊಳಿಸುತ್ತಿದ್ದಾರೆಂದು ಸುಪ್ರೀಂಕೋರ್ಟ್ ನಲ್ಲಿ ದೂರು ನೀಡಿದ್ದಾರೆ. 
ಕಾವೇರಿ ಕುರಿತಂತೆ ಕರ್ನಾಟಕ ರಾಜ್ಯಕ್ಕೆ ಕಳಂಕ ಹಚ್ಚುವ ಪ್ರಯತ್ನವನ್ನು ಮುಂದುವರೆಸಿರುವ ತಮಿಳುನಾಡು ರಾಜ್ಯ, ಕನ್ನಡಿಗರ ಜೀನವಾಡಿಯಾಗಿರುವ ಕಾವೇರಿ ನದಿಯನ್ನೇ ಕರ್ನಾಟಕ ಮಲಿನಗೊಳಿಸುತ್ತಿದೆ ಎಂದು ಆರೋಪ ಮಾಡಿದೆ. 
ತಮಿಳುನಾಡು ಮಾಡಿರುವ ಈ ಆರೋಪವನ್ನು ಪರಿಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ಈ ಬಗ್ಗೆ 6 ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಗೆ ಸೂಚನೆ ನೀಡಿದೆ. ಅಲ್ಲದೆ, ಉಭಯ ರಾಜ್ಯಗಳ ಪ್ರತಿನಿಧಿಗಳು ಈ ಬಗ್ಗೆ ಸಭೆ ನಡೆಸಲು ಸುಪ್ರೀಂ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 
ದಿನಗಳ ಹಿಂದಷ್ಟೇ ಕಾವೇರಿ ಕುರಿತಂತೆ ಕ್ಯಾತೆ ತೆಗೆದಿದ್ದ ತಮಿಳುನಾಡು, ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಈಗಲೂ ತಮಿಳುನಾಡು ರಾಜ್ಯಕ್ಕೆ  5.966 ಟಿಎಂಸಿ ನೀರು ಹರಿಸುವುದು ಬಾಕಿಯಿದ್ದು, ಕೂಡಲೇ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com