ಬೆಂಗಳೂರು: ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವವರಿಗೆ ಮೇಜರ್ ರಿಲೀಫ್ ಸಿಗಲಿದೆ. ಏಕೆಂದರೇ ಇನ್ನು ಆರು ತಿಂಗಳಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಆರಂಭವಾಗಲಿದೆ.
ಇನ್ ಸ್ಟಿಟ್ಯೂಟ್ ಆಫ್ ಇಂಜನೀಯರಿಂಗ್ ಆಯೋಜಿಸಿದ್ದ ಕಾರ್ಯಕ್ರಮದಲವ್ಲಿ ಮಾತನಾಡಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರರ ನಿರ್ದೇಶಕ ಬಿ.ಟಿ ಜ್ವಾಲೇಂದ್ರ ಕುಮಾರ್, ಎಕ್ಸ್ ಪ್ರೆಸ್ ಪ್ರಾಜೆಕ್ಟ್ ಗೆ ಬಿಡ್ ಸಲ್ಲಿಸಲು ಜುಲೈ 28 ಕೊನೆಯ ದಿನಾಂಕವಾಗಿದೆ ಎಂದು ಹೇಳಿದ್ದಾರೆ.
ಮಲೇಶಿಯಾ ಸೇರಿದಂತೆ 10 ಕಂಪನಿಗಳು ಈ ಯೋಜನೆಗೆ ಆಸಕ್ತಿ ತೋರಿವೆ, ಎರಡು ಪ್ಯಾಕೇಜ್ ನಲ್ಲಿ ಯೋಜನೆಯನ್ನು ವಿಭಾಗಿಸಿ, ಶೀಘ್ರವೇ ಪ್ರಾಜೆಕ್ಟ್ ಅಂತಿಮಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಷಟ್ಪಥ ಯೋಜನೆ ಒಮ್ಮೆ ಪೂರ್ಣವಾದರೇ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ತಲುಪಬಹುದು. ಬೆಂಗಳೂರಿನ ನೈಸ್ ರಸ್ತೆಯ ಪಂಚಮುಖಿ ದೇವಾಲಯದಿಂದ ಆರಂಭವಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಅಸ್ಪತ್ರೆ ವರೆಗ ಸುಮಾರು 118 ಕಿಮೀ ನಡುವ ಷಟ್ಪಥ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಎಕ್ಸ್ ಪ್ರೆಸ್ ರಸ್ತೆಯಲ್ಲಿ ಎಲ್ಲಾ ಕಾರು ಗಳಿಗೆ 200 ರು ಟೋಲ್ ವಿಧಿಸಲಾಗುವುದು. ಈ ಯೋಜನೆಗೆ 4,700 ಕೋಟಿ ರು ವೆಚ್ಚ ಹಾಗೂ ಭೂ ಸ್ವಾಧೀನಕ್ಕಾಗಿ 2,700 ಕೋಟಿ ರು ಹಣದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.