ಎಚ್ ಎಸ್ ಆರ್ ಲೇಔಟ್ ನಿವಾಸಿಯಿಂದ ವಿಡಿಯೋ ಅಪ್ ಲೋಡ್: 2 ದಿನದಲ್ಲಿ 14 ಸಾವಿರ ವೀಕ್ಷಣೆ

ಎಚ್ ಎಸ್ ಆರ್ ಲೇಔಟ್ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋವನ್ನು 2 ದಿನದಲ್ಲಿ 14 ಸಾವಿರ..
ಕಾರಿನಿಂದ ಸಿಡಿ ಪೌಚ್ ಕದ್ದೊಯ್ಯುತ್ತಿರುವ ವ್ಯಕ್ತಿ
ಕಾರಿನಿಂದ ಸಿಡಿ ಪೌಚ್ ಕದ್ದೊಯ್ಯುತ್ತಿರುವ ವ್ಯಕ್ತಿ
ಬೆಂಗಳೂರು: ಎಚ್ ಎಸ್ ಆರ್ ಲೇಔಟ್ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋವನ್ನು 2 ದಿನದಲ್ಲಿ 14 ಸಾವಿರ ಮಂದಿ ವೀಕ್ಷಿಸಿದ್ದಾರೆ.
ಎಚ್ ಎಸ್ ಆರ್ ಲೇಔಟ್  ನ ನಿವಾಸಿ ರೆಂಜಿತ್ ಮೋಹನ್ ದಾಸ್ ಜನರಲ್ಲಿ ಅಪರಾಧಿಗಳ ಬಗ್ಗೆ ಜಾಗೃತಿ ಮೂಡಿಸಲು ವಿಡಿಯೋ ಅಪ್ ಲೋಡ್ ಮಾಡಿದ್ದರು. ಮೇ 27 ರಂದು ರಾಷ್ಟ್ರಕೂಟ ರೆಸ್ಟೊರೆಂಟ್ ಮುಂಭಾಗ ನಡೆದ ಘಟನೆ ಸಂಬಂಧ ವಿಡಿಯೋ ಅಪ್ ಲೋಡ್ ಮಾಡಿದ್ದರು.
ಅಂದು ಮುಖ್ಯ ರಸ್ತೆಯಲ್ಲಿ ಕಾರು ಪಾರ್ಕಿಂಗ್ ಮಾಡಿ ಮೋಹನ್ ದಾಸ್ ಜಿಮ್ ಗೆ ತೆರಳಿದ್ದರು. ನಂತರ ಬಂದ ಕೆಲ ಕಿಡಿಗೇಡಿಗಳು ಅವರ ಕಾರಿನ ಕಿಟಕಿ ಗಾಜು ಒಡೆದು, ಹಣದ ಬ್ಯಾಗ್ ಎಂದು ಸಿಡಿಯಿದ್ದ ಪೌಚ್ ಅನ್ನು ಕದ್ದೊಯ್ದಿದ್ದರು. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ವಿಡಿಯೋವನನ್ನು ಮೋಹನ್ ದಾಸ್ ಪೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಎಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com