ಬೆಂಗಳೂರು: ಕರ್ನಾಟಕದಲ್ಲಿ ಇನ್ಮುಂದೆ ನೂತನ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗಳಿಗೆ ಪರವಾನಗಿ ನಿಷೇಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ.
ಇನ್ನು ರಾಜ್ಯದಲ್ಲಿ ಈಗಾಗಲೇ ಪರವಾನಗಿ ಪಡೆದಿರುವ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗಳು ಎಂದಿನಂತೆ ಸೇವೆ ಒದಗಿಸಲಿದ್ದು ರೋಗಿಗಳ ಸುರಕ್ಷಿತ ಹಿತದೃಷ್ಟಿಯಿಂದ ನೂತನ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗೆ ಪರವಾನಗಿಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಫಾರಸು ಹಿನ್ನೆಲೆ ಸಾರಿಗೆ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.