ಎಲೆಕ್ಟ್ರಾನಿಕ್ ಸಿಟಿ(ಬೆಂಗಳೂರು): ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ದಾರುಣ ಘಟನೆ ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಗೇಟ್ ಬಳಿ ಸಂಭವಿಸಿದೆ.
ಮೃತ ದುರ್ದೈವಿ ಗುಜರಾತ್ ನ ವಡೋದರ ಮೂಲದ 26 ವರ್ಷದ ಕಾವ್ಯ ಶ್ರೀ ಎಂದು ತಿಳಿದುಬಂದಿದ್ದು ಅಪಘಾತದಲ್ಲಿ ಲಾರಿ ಟೆಕ್ಕಿಯ ತಲೆ ಮೇಲೆ ಚಲಿಸಿದ್ದರಿಂದ ಟೆಕ್ಕಿ ತಲೆ ಛಿದ್ರಗೊಂಡಿದೆ. ಅಪಘಾತ ಬಳಿಕ ಲಾರಿ ಚಾಲಕ ನನ್ನು ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಕಾವ್ಯ ಶ್ರೀ ವೈಟ್ ಫೀಲ್ಡ್ ನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.