ದೌರ್ಜನ್ಯಕ್ಕೆ ಒಳಗಾದ ಯುವತಿ ನಗರದ ಕಾಲೇಜ್ ವೊಂದರ ವಿದ್ಯಾರ್ಥಿನಿಯಾಗಿದ್ದು, ತಿಂಡ್ಲು ನಿವಾಸಿಯಾಗಿದ್ದರೆ. ನಿನ್ನೆ ರಾತ್ರಿ ಸ್ನೇಹಿತ ಸುಮಲ್ಯ ಗೌತಮ್ ಜತೆ 22 ವರ್ಷದ ವಿದ್ಯಾರ್ಥಿನಿ ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ವಿದ್ಯಾನಗರ ಕ್ರಾಸ್ ನಡುವೆ ಆ್ಯಕ್ಟೀವ್ ಹೋಂಡಾದಲ್ಲಿ ಎದುರಿನಿಂದ ಬಂದ ವ್ಯಕ್ತಿ ಇವರ ಬೈಕ್ಗೆ ಅಡ್ಡವಾಗಿ ನಿಲ್ಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ನಮ್ಮ ವಾಹನದ ಕೀಯನ್ನು ಕಸಿದುಕೊಂಡರು. ಬಳಿಕ ಸುಮಾರು 40ರಿಂದ 45 ಜನ ಅಲ್ಲಿಗೆ ಆಗಮಿಸಿ ನಮ್ಮನ್ನು ಸುತ್ತುವರಿದರು ಎಂದು ಯುವತಿ ಆರೋಪಿಸಿದ್ದಾರೆ.