ಮಾಲಿನ್ಯದ ವಿರುದ್ಧ ವಿಭಿನ್ನ ಹೊರಾಟ; ಸಿದ್ಧವಾಗುತ್ತಿದೆ ಲಂಬ ಉದ್ಯಾನ!

ಸಂಚಾರ ದಟ್ಟಣೆ ಹಾಗೂ ಮಾಲಿನ್ಯದಿಂದಾಗಿ ಬಳಲಿ ಬೆಂಡಾಗಿರುವ ಬೆಂಗಳೂರು ನಿವಾಸಿಗಳಿಗೆ ಇಲ್ಲೊಂದು ಉಲ್ಲಾಸಕಾರಿ ಸುದ್ದಿ ಇದ್ದು, ಮಾಲಿನ್ಯ ನಿಯಂತ್ರಕ್ಕೆ ಇಲ್ಲೊಂದು ಸಂಘಟನೆ ವಿಭಿನ್ನ ಕ್ರಮಕ್ಕೆ ಮುಂದಾಗಿದೆ.
ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಗೆ ಅಳವಡಿಸಲಾಗಿರುವ ಉದ್ಯಾನ (ಚಿತ್ರ: ಸೇಟ್ರೀಸ್)
ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಗೆ ಅಳವಡಿಸಲಾಗಿರುವ ಉದ್ಯಾನ (ಚಿತ್ರ: ಸೇಟ್ರೀಸ್)

ಬೆಂಗಳೂರು: ಸಂಚಾರ ದಟ್ಟಣೆ ಹಾಗೂ ಮಾಲಿನ್ಯದಿಂದಾಗಿ ಬಳಲಿ ಬೆಂಡಾಗಿರುವ ಬೆಂಗಳೂರು ನಿವಾಸಿಗಳಿಗೆ ಇಲ್ಲೊಂದು ಉಲ್ಲಾಸಕಾರಿ ಸುದ್ದಿ ಇದ್ದು, ಮಾಲಿನ್ಯ ನಿಯಂತ್ರಕ್ಕೆ ಇಲ್ಲೊಂದು ಸಂಘಟನೆ ವಿಭಿನ್ನ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರಿನ ಪ್ರಮುಖ ಮೇಲ್ಸುತುವೆಯೊಂದರ ಪಿಲ್ಲರ್ ಗೆ ಲಂಬವಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿದೆ. ಖ್ಯಾತ ಪರಿಸರ ಜಾಗೃತಿ ಅಭಿಯಾನ ಸಂಸ್ಥೆ ಸೇಟ್ರೀಸ್  (SayTrees) ನೇತೃತ್ವದಲ್ಲಿ ವಿಭಿನ್ನವಾಗಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದ್ದು, ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯ ಪಿಲ್ಲರ್ ಗಳಿಗೆ ಮೇಲ್ಮುಖವಾಗಿ ಲಂಬಾಕೃತಿಯಲ್ಲಿ ಸಸಿಗಳನ್ನು ನೆಟ್ಟು ಪೋಷಣೆ  ಮಾಡಲಾಗುತ್ತಿದೆ.

ಸುಮಾರು 10 ವಿಭಿನ್ನ ಪ್ರಬೇಧಗಳ 3500ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು, ಆ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ವಿಭಿನ್ನವಾಗಿ ಪ್ರಯತ್ನಿಸಲಾಗುತ್ತಿದೆ. ಸಸಿಗಳಿಗೆ ನೀರುಣಿಸಲು ಪೈಪ್ ಗಳ ಮೂಲಕ ಸ್ವಯಂಚಾಲಿತ ಹನಿ  ನೀರಾವರಿ ವ್ಯವಸ್ಥೆ ಅಳವಡಿಸಲಾಗಿದೆ. ಪ್ರತಿ ನಿತ್ಯ ಈ ಸಸಿಗಳಿಗೆ ಸುಮಾರು 100 ಮಿಲಿ ಲೀಟರ್ ನೀರನ್ನು ಈ ಪೈಪ್ ಗಳ ಮೂಲಕ ಹಾಯಿಸಲಾಗುತ್ತದೆ. ಆ ಮೂಲಕ ಕಡಿಮೆ ನೀರಿನಲ್ಲಿ ಅತೀ ಹೆಚ್ಚು ಸಸಿಗಳ ಪೋಷಣೆ  ಮಾಡಲಾಗುತ್ತಿದೆ.

ಲಂಬ ಉದ್ಯಾನದ ಪ್ರತೀ ಭಾಗದಲ್ಲಿ ಒಂದೊಂದು ರೀತಿ ವಿನ್ಯಾಸ ಮಾಡಲಾಗಿದ್ದು, ಇದು ನೋಡುಗರ ಕಣ್ಮನ ಸೆಳೆಯುತ್ತದೆ. ಪ್ರಸ್ತುತ ಕೆಲ ಪಿಲ್ಲರ್ ಗಳಿಗೆ ಈ ಲಂಬ ಉದ್ಯಾನ ಅಳವಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಪಿಲ್ಲರ್ ಗಳಿಗೂ  ಈ ಮಾದರಿಯ ಉದ್ಯಾನ ಅಳವಡಿಸಲಾಗುತ್ತದೆ ಎಂದು ಸೇಟ್ರೀಸ್ ಹೇಳಿದೆ.

ಪಿಲ್ಲರ್ ಗಳಿಗೆ ಸಸಿಗಳನ್ನು ನೆಡುವುದರಿಂದ ಈ ಭಾಗದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಉಗುಳುವ ಇಂಗಾಲವನ್ನು ಸಸಿಗಳು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಆ ಮೂಲಕ ವಾತಾವರಣ  ಶುದ್ದಿಯಾಗುತ್ತದೆ ಎಂದು ಸೇಟ್ರೀಸ್ ಸಂಸ್ಥೆ ಹೇಳಿದೆ. ಒಟ್ಟಾರೆ ಪರಿಸರ ರಕ್ಷಣೆಗೆ ಸರ್ಕಾರವನ್ನು ಕಾಯುವ ಬದಲು ತಾವೇ ಮೊದಲು ಕಾರ್ಯಾಚರಣೆಗೆ ಇಳಿದಿರುವ ಸೇಟ್ರೀಸ್ ಸಂಸ್ಥೆಯ ಕೆಲಸಕ್ಕೆ ಎಲ್ಲೆಡೆಯಿಂದ ಶ್ಲಾಘನೆ  ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com