

ಬೆಂಗಳೂರು: ಮೇ 1 ರೊಳಗೆ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಸೋಮವಾರ ಅಂದರೆ ಇಂದು ದ್ವಿತೀಯ ಪಿಯುಸಿಯ ಇಂಗ್ಲೀಷ್ ಪೇಪರ್ ಕೊನೆಯ ಪರೀಕ್ಷೆಯಾಗಿದ್ದು, ಏಪ್ರಿಲ್ 4 ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಿ ಏಪ್ರಿಲ್ 16 ರೊಳಗೆ ಪೂರ್ಣಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮೌಲ್ಯಮಾಪನ ಅವಧಿಯನ್ನು ಹೆಚ್ಚಿಸಿದ್ದು, ಮೌಲ್ಯಮಾಪನ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೌಲ್ಯ ಮಾಪನ ಬಹಿಷ್ಕರಿಸದಿರಲು ಉಪನ್ಯಾಸಕರು ನಿರ್ಧರಿಸಿದ್ದಾರೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವ ತನ್ವೀರ್ ಸೇಠ್ ಜೊತೆಗಿನ ಮಾತುಕತೆ ನಂತರ ಮೌಲ್ಯಮಾಪನ ಬಹಿಷ್ಕರಿಸದಿರಲು ಉಪನ್ಯಾಸಕ ಸಂಘ ತೀರ್ಮಾನಿಸಿದೆ, ಕಳೆದ ವರ್ಷ ಉಪನ್ಯಾಸಕರ ಪ್ರತಿಭಟನೆಯಿಂದಾಗಿ 18 ದಿನ ತಡವಾಗಿ ಮೌಲ್ಯಮಾಪನ ಆರಂಭವಾಗಿತ್ತು.