ನನ್ನ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ಗೆ ವಹಿಸುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಲು ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿರುವ ಆತ, ನಾನು ವಿಧಾನಸೌಧದ ಮುಂದೆ ಬಂದು ಸಾಯುತ್ತೇನೆ, ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಇತ್ತೀಚೆಗೆ ಕಳುಹಿಸಿರುವ ಎರಡನೇ ಸಿಡಿಯಲ್ಲಿ ತಿಳಿಸಿದ್ದಾನೆ. ನಾನು ಹಾಗೂ ಸಂಸದ ಪಿಸಿ ಮೋಹನ್ ಒಳ್ಳೆಯ ಸ್ನೇಹಿತರು, ಇದಕ್ಕೆ ಸಾಕ್ಷ್ಯ ಬೇಕಾದರೇ ಅವರ ಫೋನ್ ಡಿಟೈಲ್ಸ್ ತೆಗೆಸಿ ನೋಡಿ ಎಂದು ಸವಾಲು ಹಾಕಿದ್ದಾನೆ.