ಬಿಎಂಟಿಸಿ ಬಸ್ ನಲ್ಲಿ ಯುವತಿಗೆ ಕಿರುಕುಳ: ಆರೋಪಿಯನ್ನು 10 ನಿಮಿಷದಲ್ಲೇ ಬಂಧಿಸಿದ ಪಿಂಕ್ ಹೊಯ್ಸಳ

ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ಕೇವಲ 10 ನಿಮಿಷದಲ್ಲೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ಕೇವಲ 10 ನಿಮಿಷದಲ್ಲೇ ಬಂಧಿಸಿದ್ದಾರೆ.
ವೈಟ್ ಫೀಲ್ಡ್ ನ ಟೆಕ್ ಕಂಪನಿಯಲ್ಲಿ ಕೆಲಸ ಮಾಡುವ ಮಧುಸೂದನ್‌ ರಾವ್‌ (47) ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಸಂಜೆ ಯುವತಿ  ಮನೆಗೆ ಹೋಗಲು ಬಿಎಂಟಿಸಿ ವೋಲ್ವೋ ಬಸ್ ಹತ್ತಿದ್ದರು. ಈ ವೇಳೆ ಯುವತಿಯ ಸೀಟಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆರೋಪಿ ಬಸ್‌ ಚಲಿಸುತ್ತಿದ್ದಂತೆ ಕಾಲುಗಳನ್ನು ಯುವತಿಯ ಕಾಲಿಗೆ ತಾಗಿಸಲು ಆರಂಭಿಸಿದ್ದ. ಬಳಿಕ ಬೆನ್ನು ಮುಟ್ಟಿ ಸೊಂಟಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸುತ್ತಿದ್ದ.
ಆರೋಪಿಯ ವರ್ತನೆಯಿಂದ ನೊಂದ ಯುವತಿಯು ಬೆಳ್ಳಂದೂರು ಠಾಣೆಗೆ ಕರೆ ಮಾಡಿ ಸಹಾಯಕ್ಕಾಗಿ ಕೋರಿದ್ದರು. ಘಟನಾ ಸ್ಥಳದಿಂದ 1 ಕಿ.ಮೀ ದೂರದಲ್ಲಿದ್ದ ಪಿಂಕ್‌ ಹೊಯ್ಸಳ ವಾಹನದ ಸಿಬ್ಬಂದಿಗೆ ವಿಷಯ ತಿಳಿಸಿದ್ದೆವು. 
ವಾಹನದಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್‌ಗಳಾದ ಬಿ.ಮಹೇಶ್‌, ಆರಿಫ್ ಪಾಷಾ ಹಾಗೂ ಕಾನ್‌ಸ್ಟೆಬಲ್‌ ಬಿ. ಪವಿತ್ರಾ  ರಸ್ತೆಯಲ್ಲಿ ಬಸ್‌ ನಿಲ್ಲಿಸಿ, ಒಳಗೆ ಹೋಗಿ,  ಕೂಡಲೇ ಆರೋಪಿಯನ್ನು ಪಿಂಕ್ ಹೊಯ್ಸಳ ಸಿಬ್ಬಂದಿ ಬಂಧಿಸಿದ್ದಾರೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com