ಬೆಳಗಾವಿ :ಉದ್ಯಮಿ ಬದಲು ಮಗನನ್ನು ಕಿಡ್ನಾಪ್ ಮಾಡಿದ್ದ ರಶೀದ್ ಮಲಬಾರಿ ಗ್ಯಾಂಗ್

ಭೂಗತ ಪಾತಕಿ ರಶೀದ್ ಮಲಬಾರಿ ತಂಡ ಉದ್ಯಮಿ ಸುರೇಶ್ ರಾಡೇಕರ್ ಅವರನ್ನು ಕಿಡ್ನಾಪ್ ಮಾಡುವ ಬದಲು, ಅವರ ಪುತ್ರ ರೋಹನ್ ರಾಡೇಕರ್ ಅವರನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಳಗಾವಿ: ಭೂಗತ ಪಾತಕಿ ರಶೀದ್ ಮಲಬಾರಿ ತಂಡ ಉದ್ಯಮಿ ಸುರೇಶ್ ರಾಡೇಕರ್ ಅವರನ್ನು ಕಿಡ್ನಾಪ್ ಮಾಡುವ ಬದಲು, ಅವರ ಪುತ್ರ  ರೋಹನ್ ರಾಡೇಕರ್ ಅವರನ್ನು ಅಪಹರಿಸಿದ್ದ ವಿಷಯ ಬಯಲಾಗಿದೆ. ಕಿಡ್ನಾಪ್, ಕೊಲೆ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನವಾರ ಬೆಳಗ್ಗೆ ಬೆಳಗಾವಿ ಪೋಲೀಸರು ಆರು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ ಬಹಿರಂಗವಾಗಿದೆ.
ಭೂಗತ ಪಾತಕಿ ರಶೀದ್‌ ಮಲಬಾರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ನಜೀರ್‌ ನದಾಫ ಅವರನ್ನು ಸೋಮವಾರ ಬಂಧಿಸಲಾಗಿದೆ.
ಎರಡು ವರ್ಷಗಳ ನಂತರ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ನಜೀರ್‌ ನದಾಫ ಸೇರಿ ರಶೀದ್‌ ಸಹಚರರಾದ ನವೀದ್‌ ಖಾಜಿ ಹಾಗೂ ಸರ್ಫರಾಜ್‌ನನ್ನು ಬಂಧಿಸಿದ್ದಾರೆ. ಜೆ.ಎಂ.ಎಫ್‌. ನ್ಯಾಯಾಲಯವು ನದಾಫ ಅವರನ್ನು14 ದಿನಗಳವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.
ತಮ್ಮ ಯೋಜನೆಯಂತೆ 2015ರ ಫೆಬ್ರುವರಿ 18ರಂದು ಬೆಳಗಾವಿಯ ಹೊರವಲಯದಲ್ಲಿ ಸುರೇಶ ಅವರ ಕಾರನ್ನು ಅಡ್ಡಗಟ್ಟಿದರು. ಆಗ ಕಾರಿನಲ್ಲಿ ಸುರೇಶ ಬದಲಿಗೆ, ಅವರ ಮಗ ರೋಹನ್ ಪ್ರಯಾಣಿಸುತ್ತಿದ್ದರು. ಇದರಿಂದ ವಿಚಲಿತರಾದ ರಶೀದ್‌ ಹಾಗೂ ಸಹಚರರು ರೋಹನ್‌ ಅವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಚೋರ್ಲಾ ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಹತ್ಯೆ ಮಾಡಿ, ಶವವನ್ನು ಅರಣ್ಯ ಪ್ರದೇಶದಲ್ಲಿ ಬಿಸಾಕಿ ಹೋಗಿದ್ದರು ಎಂದು ಪೊಲೀಸರು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com