ಹಾಗೆಯೇ, ರೈಲು (ಸಂಖ್ಯೆ 17326) ನಿತ್ಯ ಬೆಳಿಗ್ಗೆ 6.15ಕ್ಕೆ ಮೈಸೂರಿನಿಂದ ಹೊರಟು 9.10ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 9.15ಕ್ಕೆ ಹೊರಟು ಸಂಜೆ 7.05ಕ್ಕೆ ಹುಬ್ಬಳ್ಳಿ ತಲುಪಲಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ. ರೈಲು ಸೇವೆ ಉದ್ಘಾಟನೆ ಮಾಡಿ ಮಾತನಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ರೈಲು ಸೇವೆಯಿಂದ ಹೆಚ್ಚು ಪ್ರಯೋಜನವಾಗಲಿದೆ. ಚಾಮುಂಡಿ ಎಕ್ಸ್ ಪ್ರೆಸ್ ಗಿಂತ ಅರ್ಧ ಗಂಟೆ ಮುನ್ನ ಹೊಸ ರೈಲು ಹೊರಡಲಿದ್ದು, ಉದ್ಯೋಗಿಗಳು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಹೊಸ ರೈಲು ಉದ್ಘಾಟನೆಯಿಂದ ಈ ಭಾಗದ ಪ್ರಯಾಣೀಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.