ಬೆಂಗಳೂರು: ಪಿಂಕ್ ಹೊಯ್ಸಳ ಮತ್ತು ಪಾರ್ಕಿಂಗ್ ನಲ್ಲಿ ರಿಸರ್ವೇಸನ್ ನಂತರ
ಮಹಿಳೆಯರಿಗಾಗಿ ಬರುವ ಜನವರಿಯಿಂದ ಪಿಂಕ್ ಆಟೋ ರಸ್ತೆಗಿಳಿಯಲಿವೆ. ಕೇವಲ ಮಹಿಳೆ ಮತ್ತು ಮಕ್ಕಳು ಮಾತ್ರ ಪಿಂಕ್ ಆಟೋದಲ್ಲಿ ಪ್ರಯಾಣಿಸಬಹುದಾಗಿದ್ದು, ಮಹಿಳೆ ಇಲ್ಲವೇ ಪುರುಷ ಚಾಲಕರಿರುತ್ತಾರೆ.
ಬಿಬಿಎಂಪಿ ಸಮಾಜ ಕಲ್ಯಾಣ ಯೋಜನೆಯಡಿ ಶೇ.20 ರಷ್ಟು ಆಟೋಗಳನ್ನು ಈಗಾಗಲೇ ಮಹಿಳೆಯರಿಗಾಗಿ ಮೀಸಲಿಟ್ಟಿದೆ ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.
ಈಗ ಇಕುವ ಆಟೋಗಳಂತೆ ಪಿಂಕ್ ಆಟೋ ಮಾದರಿಯೂ ಇರುತ್ತದೆ. ಆದರೆ ಗುಲಾಬಿ ಬಣ್ಣದ ಪೈಂಟ್ ಮಾಡಲಾಗಿರುತ್ತದೆ. ಜನವರಿಯಿಂದ ಪಿಂಕ್ ಆಟೋ ಸಂಚರಿಸಲಿದ್ದು, ಬಿಬಿಎಂಪಿ 300-400 ಆಟೋಗಳನ್ನು ವಿತರಿಸಲಾಗಿದೆ. ಜನವರಿಯಿಂದ ಪೈಲಟ್ ಹಂತ ಆರಂಭವಾಗಲಿದೆ.
ಇನ್ನೂ ಹೊಸ ಖರೀದಿಸಲು 25 ಸಾವಿರ ರು. ಸಬ್ಸಿಡಿ ಕೂಡ ನೀಡಲಾಗುತ್ತದೆ. ಬಿಬಿಎಂಪಿ ವಿವಿಧ ಕಂಪನಿಗಳೊಂದಿಗೆ ಮಾತನಾಡಿದ್ದು, ಸಿಎಸ್ ಆರ್ ಅಳವಡಿಸಲು ಚರ್ಚಿಸಿರುವುದಾಗಿ ತಿಳಿಸಿದ್ದಾರೆ.