ರಾಜ್ಯ

ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಂಪುಟ ಅಸ್ತು: 2018ನೇ ಸಾಲಿಗೆ 23 ಸಾರ್ವತ್ರಿಕ ರಜೆ

ರಾಜ್ಯ ಸರ್ಕಾರ 2018ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಮುಂದಿನ ವರ್ಷದ ಸರ್ಕಾರಿ ನೌಕರರು ಒಟ್ಟು 23 ಸಾರ್ವತ್ರಿಕ ರಜೆ...

ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಂಪುಟ ಅಸ್ತು: 2018ನೇ ಸಾಲಿಗೆ 23 ಸಾರ್ವತ್ರಿಕ ರಜೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರಾಜ್ಯ ಸರ್ಕಾರ 2018ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಮುಂದಿನ ವರ್ಷದ ಸರ್ಕಾರಿ ನೌಕರರು ಒಟ್ಟು 23 ಸಾರ್ವತ್ರಿಕ ರಜೆಗಳನ್ನು ಪಡೆಯಲಿದ್ದಾರೆ. 
2018ರಲ್ಲಿ ವಾರಾಂತ್ಯದ ಬದಲಿಗೆ ಬಹುಪಾಲು ವಾರದ ದಿನಗಳಲ್ಲೇ ಹೆಚ್ಚು ಹಬ್ಬ ಹಾಗೂ ಜಯಂತಿಗಳು ಬಂದಿರುವ ಹಿನ್ನಲೆಯಲ್ಲಿ ಈ ಬಾರಿಯ ಸಾರ್ವತ್ರಿಕ ರಜೆ ಪಟ್ಟಿ 23ಕ್ಕೆ ತಲುಪಿದೆ, ಈ ಮುಂಚಿನ ವರ್ಷಗಳಲ್ಲ ವಾರ್ಷಿಕ ರಜಾ ದಿನಗಳ ಪಟ್ಟೆ 18 ರಿಂದ 19ಕ್ಕೆ ಸೀಮಿತವಾಗಿರುತ್ತಿತ್ತು.
ಸರ್ಕಾರಿ ನೌಕರರು ಒಟ್ಟಾರೆಯಾಗಿ ಮುಂದಿನ ವರ್ಷ 23 ಸಾರ್ವತ್ರಿಕ ರಜೆಗಳು, 52 ಭಾನುವಾರಗಳು, 12 ಎರಡನೇ ಶನಿವಾರದ ರಜೆಗಳು ಸೇರಿದಂತೆ ಒಟ್ಟು 87 ರಜೆಗಳನ್ನು ಅನುಭವಿಸಲಿದ್ದಾರೆ. 
ಚಂದ್ರಮಾನ ಯುಗಾದಿ (ಮಾ.18)ರಂದು ಭಾನುವಾರ ಬರಲಿದ್ದು, ಡಾ.ಅಂಬೇಡ್ಕರ್ ಜಯಂತಿ ಏ.14ರಂದು 2ನೇ ಶನಿವಾರ ಬರಲಿರುವ ಕಾರಣ ರಜಾಪಟ್ಟಿಯಲ್ಲಿ ಸೇರಿಲ್ಲ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.