ಏತನ್ಮಧ್ಯೆ, ಅರ್ಚಕ, ಮಹಿಲಾ ಮಹಿಳಾ ಸಹೋದ್ಯೋಗಿಗಳೊಡನೆ ಸ್ನಾನಕ್ಕಿಳಿಯುವಂತೆ ಪುಸಲಾಯಿಸುತ್ತಿರುವ ಅಸಭ್ಯ ವರ್ತನೆಯ ದೃಶ್ಯವಿರುವ ವೀಡಿಯೋ ಕ್ಲಿಪ್ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಆದರೆ ಇದೇ ವೇಳೆ ವಿದ್ಯಾದಾಸ ಬಾಬಾ ಮಾತ್ರ ನಾನು ನಿರಪರಾಧಿ, ನಕಲಿ ವೀಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟು ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.