ಬೆಂಗಳೂರು: ಒಂಭತ್ತನೇ ಮಹಡಿಯಿಂದ ಜಿಗಿದು ತಮಿಳುನಾಡು ಮೂಲದ ಮಹಿಳೆ ಆತ್ಮಹತ್ಯೆ

ಬೆಂಗಳೂರಿನ ಮಾರತ್ ಹಳ್ಳಿಯ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಅಲೋಫ್ಟ್ ಹೊಟೆಲ್ ಒಂಭತ್ತನೇ ಮಹಡಿಯಿಂದ ಹಾರಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ಹೋಟೆಲ್ ನ ಒಂಭತ್ತನೇ ಮಹಡಿಯಿಂದ ಜಿಗಿದು ತಮಿಳು ನಾಡು ಮೂಲದ ಮಹಿಳೆ ಆತ್ಮಹತ್ಯೆ
ಬೆಂಗಳೂರು: ಹೋಟೆಲ್ ನ ಒಂಭತ್ತನೇ ಮಹಡಿಯಿಂದ ಜಿಗಿದು ತಮಿಳು ನಾಡು ಮೂಲದ ಮಹಿಳೆ ಆತ್ಮಹತ್ಯೆ
Updated on
ಬೆಂಗಳೂರು: ಬೆಂಗಳೂರಿನ ಮಾರತ್ ಹಳ್ಳಿಯ ಸೆಸ್ನಾ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಅಲೋಫ್ಟ್ ಹೊಟೆಲ್ ಒಂಭತ್ತನೇ ಮಹಡಿಯಿಂದ ಹಾರಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳು ನಾಡಿನ ಕಾರೈಕುಡಿ ಮೂಲದ ವಿ. ವಲ್ಲಿಯಮ್ಮೈ (34) ಆತ್ಮಹತ್ಯೆಗೆ ಶರಣಾಗಿದ್ದು ಘಟನೆಗೆ  ನಿಖರ ಕಾರಣ ತಿಳಿದುಬಂದಿಲ್ಲ.
ಇಂದು ಬೆಳಗ್ಗೆ 11.15 ಕ್ಕೆ ಈ ಘಟನೆ ಸಂಭವಿಸಿದೆ. ವೈಟ್ ಫೀಲ್ಡ್ ಶಾಖೆಯ ಡಿಸಿಪಿ ಆಗಿರುವ ಅಬ್ದುಲ್ ಅಹಾದ್ ಹೇಳಿದಂತೆ ಆಕೆ ಪೇಂಟಿಂಗ್ ಕಿಟ್ ಒಂದನ್ನು ಹಿಡಿದು ಹೋಟೆಲ್ ನ ಒಂಭತ್ತನೇ ಮಹಡಿಯಿಂದ ಹಾರಿದ್ದಾರೆ. ಭಾನುವಾರ ಸಂಜೆ ಹೋಟೆಲ್ ನಲ್ಲಿ ಕೋಣೆ ಪಡೆದಿದ್ದ ಮಹಿಳೆ ತನ್ನ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ನಾವು ಆಕೆಯ ಪತಿ ಹಾಗೂ ಮಕ್ಕಳ ಮಾಹಿತಿಗಾಗಿ ಹುಡುಕುತ್ತಿದ್ದೇವೆ.
ಮಾರತ್ ಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಬ್ಯುಸಿನೆಸ್ ಪಾರ್ಕ್ ನಲ್ಲಿ ಇದು ಎರಡನೇ ಆತ್ಮಹತ್ಯೆ ಪ್ರಕರಣ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com