ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನವೀಕರಣಗೊಂಡಿದ್ದು ಇದೀಗ ಏರ್ ಇಂಡಿಯಾ ಬೆಂಗಳೂರು-ಮುಂಬೈ ನಡುವೆ ಹಾರಾಟ ನಡೆಸಲಿರುವ ಏರ್ ಬಸ್ 319 ವಿಮಾನ ಬೆಂಗಳೂರಿನಿಂದ ತೆರಳಿ ಹುಬ್ಬಳ್ಳಿ ಮೂಲಕ ಮುಂಬೈಗೆ ಸಂಚಾರ ಬೆಳೆಸಲಿದೆ.
ಬೆಂಗಳೂರು-ಮುಂಬೈ ವಿಮಾನ ವಯಾ ಹುಬ್ಬಳ್ಳಿ ಹಾರಾಟ ಡಿಸೆಂಬರ್ 15ರಿಂದ ಪ್ರಾರಂಭವಾಗಲಿದೆ. ಏರ್ ಬಸ್ 319 ವಿಮಾನದಲ್ಲಿ 120 ಸೀಟುಗಳು ಹೊಂದಿವೆ. ಈ ವಿಮಾನ ಸದ್ಯ ಅಸ್ವಿತ್ವದಲ್ಲಿರುವ ಬೆಂಗಳೂರು-ಹುಬ್ಬಳ್ಳಿ ಬೆಂಗಳೂರು ಎಟಿಐರ್-72 ವಿಮಾನಕ್ಕೆ ಹೆಚ್ಚುವರಿಯಾಗಿರುತ್ತದೆ.
ಡಿಸೆಂಬರ್ 15ರಿಂದ ಏರ್ ಬಸ್ 319 ವಿಮಾನ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿಯಲ್ಲಿ ಸ್ಟಾಪ್ ಕೊಟ್ಟು ನಂತರ ಮುಂಬೈಗೆ ಹಾರಲಿದೆ. ಮೊದಲಿಗೆ ವಾರದಲ್ಲ ಮೂರು ದಿನಗಳು ವಿಮಾನ ಹಾರಾಟ ನಡೆಸಲಿದ್ದು ನಂತರ ದಿನಂಪ್ರತಿ ಹಾರಾಟ ನಡೆಸಲಿವೆ ಎಂದು ಏರ್ ಇಂಡಿಯಾ ಮೂಲಗಳಿಂದ ತಿಳಿದುಬಂದಿದೆ.