ಮಾಧ್ಯಮಗಳು ವರದಿ ಮಾಡಿರುವಂತೆ ಬೆಂಗಳೂರು ಮೂಲದ ವಕೀಲ ಜಯಶ್ರೀ ಶ್ರೀಧರ್ ಎಂಬುವವರು ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಸುಮಾರು 4 ಕೆಜಿ ತೂಕದ ಚಿನ್ನದ ಬಾಗಿಲನ್ನು ಸರ್ಮರ್ಪಿಸಿದ್ದಾರೆ. ಗರ್ಭಗುಡಿ ಬಾಗಿಲಿಗೆ ಚಿನ್ನದ ಪಟ್ಟಿ ಬಾಗಿಲು ಅರ್ಪಿಸುವುದಾಗಿ ಈ ಹಿಂದೆ ಜಯಶ್ರೀ ಶ್ರೀಧರ್ ಅವರು ಹರಕೆ ಹೊತ್ತಿದ್ದರಂತೆ. ಅದರಂತೆ 2 ವರ್ಷಗಳ ಹಿಂದೆ ದೇಗುಲದ ಆಡಳಿತ ಮಂಡಳಿಯೊಂದಿಗೆ ಈ ಬಗ್ಗೆ ಚರ್ಚಿಸಿ, ಆಡಳಿತ ಮಂಡಳಿಯಿಂದ ಒಪ್ಪಿಗೆ ಪಡೆದು ಇದೀಗ ತಮ್ಮ ಹರಕೆ ತೀರಿಸಿದ್ದಾರೆ.