ಶ್ರೀನಗರದ ದಾಲ್ ಸರೋವರ ಶುದ್ಧಿಯಾಗಿರುವಾಗ ಬೆಳ್ಳಂದೂರು ಏಕಿಲ್ಲ?: ಎನ್ ಜಿಟಿ

ಬೆಳ್ಳಂದೂರು ಕೆರೆ ಶುದ್ಧೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಹಸಿರು ನ್ಯಾಯಾಧಿಕರಣ ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಕೆರೆ ಶುದ್ದಿಗೆ ಸಮಯ ಕೇಳಿದ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಬೆಳ್ಳಂದೂರು ಕೆರೆ ಶುದ್ಧೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಹಸಿರು ನ್ಯಾಯಾಧಿಕರಣ ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಕೆರೆ ಶುದ್ದಿಗೆ ಸಮಯ ಕೇಳಿದ ಸರ್ಕಾರದ ನಡೆಗೆ ಅಸಮಾಧಾನ  ವ್ಯಕ್ತಪಡಿಸಿದೆ.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿ ಸಂಬಂಧ ಹಸಿರು ನ್ಯಾಯಾಧಿಕರಣದ ನ್ಯಾಯಾಧೀಶ ಸ್ವತಂತ್ರ ಕುಮಾರ್ ಅವರು ಇಂದು ವಿಚಾರಣೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು  ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಮತ್ತಷ್ಟು ದಿನಗಳ ಕಾಲಾವಕಾಶ ಕೇಳಿದರು. ಕೆರೆಯ ನೀರನ್ನು ಸಂಪೂರ್ಣವಾಗಿ ಹೊರತೆಗೆದು ಕೆರೆಯನ್ನು ಖಾಲಿ ಮಾಡಿ ಬಳಿಕ ಕೆರೆಯನ್ನು ಶುದ್ಧೀಕರಿಸಬೇಕಿದೆ. ಹೀಗಾಗಿ ಮತ್ತಷ್ಟು ಕಾಲಾವಕಾಶ  ಬೇಕು ಎಂದು ಕೇಳಿತ್ತು.

ಆದರೆ ರಾಜ್ಯ ಸರ್ಕಾರದ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಹಸಿರು ನ್ಯಾಯಾಧಿಕರಣ ನ್ಯಾಯಾಧೀಶ ಸ್ವತಂತ್ರ ಕುಮಾರ್ ಅವರು, ಕೆರೆ ಶುದ್ಧೀಕರಣಕ್ಕೆ ನೀರು ಖಾಲಿ ಮಾಡುವ ಅಗತ್ಯವಿಲ್ಲ. ಶ್ರೀನಗರದ ದಾಲ್ ಸರೋವರವನ್ನು  ನೀರು ಖಾಲಿ ಮಾಡದೆಯೇ ಶುದ್ಧೀಕರಿಸಲಾಗಿತ್ತು. ಹೀಗಾಗಿ ಬೆಳ್ಳಂದೂರು ಕೆರೆಯನ್ನು ಅದೇ ಮಾದರಿಯಲ್ಲಿ ಶುದ್ಧೀಕರಿಸುವತ್ತ ಗಮನ ನೀಡಿ ಎಂದು ಹೇಳಿದ್ದಾರೆ. ಅಂತೆಯೇ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದ್ದಾರೆ  ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com