ಬೆಂಗಳೂರು: ಸೆಪ್ಟೆಂಬರ್ ನಲ್ಲಿ ಶೇ.373ರಷ್ಟು ಹೆಚ್ಚುವರಿ ಮಳೆ

ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಗರಿಷ್ಠ ಮಳೆಯಾಗಿದೆ. ಈ ಹಿಂದಿನ ವರ್ಷಗಳ ದಾಖಲೆಗಳನ್ನೆಲ್ಲಾ ಮುರಿದಿದೆ...
ಬೆಂಗಳೂರಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ರಸ್ತೆಯೊಂದರಲ್ಲಿ ನೀರು ತುಂಬಿರುವುದು.
ಬೆಂಗಳೂರಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ರಸ್ತೆಯೊಂದರಲ್ಲಿ ನೀರು ತುಂಬಿರುವುದು.
Updated on: 

ಬೆಂಗಳೂರು: ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಗರಿಷ್ಠ ಮಳೆಯಾಗಿದೆ. ಈ ಹಿಂದಿನ ವರ್ಷಗಳ ದಾಖಲೆಗಳನ್ನೆಲ್ಲಾ ಮುರಿದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ವರದಿ ಪ್ರಕಾರ, ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ಶೇಕಡಾ 373ರಷ್ಟು ಹೆಚ್ಚಿನ ಮಳೆ ಬಿದ್ದಿದೆ.

ಸೆಪ್ಟೆಂಬರ್ 1ರಿಂದ 8ರವರೆಗೆ ನಗರದಲ್ಲಿ 154 ಮಿಲಿ ಮೀಟರ್ ಮಳೆಯಾಗಿದ್ದು, ಸಾಮಾನ್ಯ ಮಳೆಯ ಪ್ರಮಾಣ 33 ಮಿಲಿ ಮೀಟರ್. ಇದು ಯಾವುದೇ ಚಂಡಮಾರುತದಿಂದಾಗಿ ಸುರಿದ ಮಳೆಯಲ್ಲ. ಆದರೆ ಮೇಲಿನ ವಾಯು ಚಂಡಮಾರುತ ಪರಿಚಲನೆಯಿಂದಾಗಿ. ಹೀಗಾಗಿ ದಕ್ಷಿಣ ಕರ್ನಾಟಕ, ತಮಿಳು ನಾಡು ಮತ್ತು ಕೇರಳದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಈ ಮೇಲಿನ ವಾಯು ಚಂಡಮಾರುತ ಪರಿಚಲನೆ ಮುಂದಿನ ಎರಡು ದಿನಗಳ ಕಾಲ ತ್ವರಿತವಾಗಿರಲಿದ್ದು, ಭಾರೀ ಮಳೆ ಸುರಿಯುವ ಮುನ್ಸೂಚನೆಯಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿ ಗವಾಸ್ಕರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕಳೆದ ರಾತ್ರಿ ಬೆಂಗಳೂರು ನಗರದಾದ್ಯಂತ ಭಾರೀ ಮಳೆ ಸುರಿದಿದ್ದು 60ಕ್ಕೂ ಹೆಚ್ಚು ಮರಗಳು ಬುಡಸಮೇತ ಬಿದ್ದಿವೆ. ಸಿದ್ದಾಪುರ, ಗಿರಿನಗರ, ಬಸವನಗುಡಿ, ವಿ.ವಿ.ಪುರಂ,ಕೋರಮಂಗಲ, ಮಡಿವಾಳ ಮತ್ತು ಇತರ ಪ್ರದೇಶಗಳಲ್ಲಿ ಹಾನಿಯಾಗಿವೆ. ಕೋರಮಂಗಲ, ಬಿಟಿಎಂ ಲೇ ಔಟ್ ಮತ್ತು ಮಡಿವಾಳಗಳಲ್ಲಿ ಹಲವು ಮನೆಗಳಿಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿವೆ. ಹಲವು ದ್ವಿಚಕ್ರ, ನಾಲ್ಕು ಚಕ್ರ ವಾಹನಗಳು ಮರ ಬಿದ್ದು ಹಾನಿಗೊಳಗಾಗಿವೆ. ಆರ್ ವಿ ಕಾಲೇಜು ಹತ್ತಿರ ಲಾಲ್ ಬಾಗ್ ಕಂಪೌಂಡ್ ನ ಭಾಗ ಕುಸಿದು ಬಿದ್ದಿದೆ. 34 ಎಲೆಕ್ಟ್ರಿಕ್ ಪೋಲ್ ಗಳು ದಕ್ಷಿಣ ಬೆಂಗಳೂರು ಭಾಗಗಳಲ್ಲಿ ಮುರಿದು ಬಿದ್ದು ಹಲವೆಡೆ ವಿದ್ಯುತ್ ಇಲ್ಲದಾಗಿದೆ.

ಕಲಾಸಿಪಾಳ್ಯದಲ್ಲಿ ಹಲವು ಹದ್ದುಗಳು ಮಳೆಗೆ ಸತ್ತು ಹೋಗಿವೆ. ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ 21 ತಂಡಗಳನ್ನು ರಚಿಸಿವೆ. ಎಲೆಕ್ಟ್ರಿಕ್ ಪೋಲ್ ಗಳನ್ನು ದುರಸ್ತಿಗೊಳಿಸಲು ಬೆಸ್ಕಾಂ ತಂಡವನ್ನು ರಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com