ಪ್ರೇಯಸಿಯರ ಜತೆಗೆ ಜಾಲ್ ರೈಡ್ ಗಾಗಿ ಬೈಕ್'ಗಳ ಕಳವು: ಮೂವರ ಬಂಧನ

ಪ್ರೇಯಸಿಯರ ಜತೆಗೆ ಜಾಲಿರೈಡ್ ತೆರಳುವ ಸಲುವಾಗಿ ಬೈಕ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೋರಮಂಗಳ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಪ್ರೇಯಸಿಯರ ಜತೆಗೆ ಜಾಲಿರೈಡ್ ತೆರಳುವ ಸಲುವಾಗಿ ಬೈಕ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೋರಮಂಗಳ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ. 
ಇಮ್ರಾನ್ ಪಾಷಾ (20), ನವಾಜ್ ಖಾನ್ (20), ಮೊಹಮ್ಮದ್ ಆರೀಫ್ (21) ಬಂಧಿತ ಆರೋಪಿಗಳಾಗಿದ್ದಾರೆ. 
ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಪ್ರೀತಿಯ ಬಲೆಗೆ ಬಿದ್ದಿದ್ದರು. ಮನೆಯ ಮುಂದೆ ನಿಲ್ಲಿಸುತ್ತದ್ದ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ಕದ್ದ ಬೈಕ್ ನಲ್ಲಿ ತಮ್ಮ ಪ್ರೇಯಸಿಯರೊಂದಿಗೆ ಜಾಲಿ ರೈಡ್'ಗೆ ತೆರಳುತ್ತಿದ್ದರು. ಸ್ವಲ್ಪ ದಿನದ ಬಳಿಕ ಕಡಿಮೆ ಮೊತ್ತಕ್ಕೆ ಬೈಕ್ ಗಳನ್ನು ಮಾರಾಟ ಮಾಡುತ್ತಿದ್ದರು. ಕಡಿಮೆ ಮೊತ್ತಕ್ಕೆ ಬೈಕ್ ಗಳು ಸಿಗುತ್ತಿದ್ದ ಕಾರಣ ಸಾರ್ವಜನಿಕರು ಪುನಃ ಆರೋಪಿಗಳನ್ನು ಸಂಪರ್ಕಿಸುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 
ಎಂದಿನಂತೆ ಶನಿವಾರ ತಮ್ಮ ಪ್ರೇಯಸಿಯರೊಂದಿಗೆ ಆರೋಪಿಗಳು ಕದ್ದ ಬೈಕ್ ನಲ್ಲಿ ಜಾಲಿ ರೈಡ್ ಗೆ ಹೋಗುತ್ತಿದ್ದ ವೇಳೆ ಪೊಲೀಸರು ವಾಹನವನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದ ಮೇಲೆ ನೋಂದಾವಣಿ ಸಂಖ್ಯೆ ಇಲ್ಲದಿರುವುದು ಕಂಡು ಬಂದಿದೆ. ಈ ವೇಳೆ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. 
ಆರೋಪಿಗಳ ಬಂಧನದಿಂದ ಕೋರಮಂಗಲ, ಮಡಿವಾಳ, ಜಾಲಹಳ್ಳಿ ಹಾಗೂ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com