ಬೆಂಗಳೂರು: ಸ್ಟಾರ್ ಹೊಟೇಲ್ ನಲ್ಲಿ ಬಾಲಕನಿಗೆ ಮದ್ಯ ಪೂರೈಕೆ, ಸಾಮಾಜಿಕ ಮಾಧ್ಯಮದಲ್ಲಿ ಪೋಷಕರ ಪೋಸ್ಟ್

ಹೊಟೇಲ್ ಸಿಬ್ಬಂದಿಯ ಅಜಾಗರೂಕತೆಯಿಂದ 8 ವರ್ಷದ ಬಾಲಕನಿಗೆ ಆಲ್ಕೋಹಾಲ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಟೇಲ್ ಸಿಬ್ಬಂದಿಯ ಅಜಾಗರೂಕತೆಯಿಂದ 8 ವರ್ಷದ ಬಾಲಕನಿಗೆ ಆಲ್ಕೋಹಾಲ್ ಪೂರೈಸಲಾಗಿದೆ ಎಂದು ಪೋಷಕರು ಹೇಳಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸುಪ್ರಿಯಾ ಜಂಬುನಾಥನ್ ಮತ್ತು ಆಕೆಯ ಕುಟುಂಬಸ್ಥರು ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಫೈವ್ ಸ್ಟಾರ್ ಹೊಟೇಲೊಂದಕ್ಕೆ ರಾತ್ರಿ ಊಟಕ್ಕೆ ಹೋಗಿದ್ದರು. ಹೊಟೇಲ್ ಸಿಬ್ಬಂದಿ ಆರಂಭದಿಂದಲೇ ನಿಧಾನವಾಗಿ ಆಹಾರವನ್ನು ಒದಗಿಸುತ್ತಿದ್ದರು. ನಂತರ 4 ಮಾಕ್ ಟೇಲ್ಸ್ ನ್ನು ಆರ್ಡರ್ ಮಾಡಿದರು. ಆದರೆ ನಾಲ್ಕರಲ್ಲಿ ಒಂದನ್ನು ಸುಪ್ರಿಯಾರ 8 ವರ್ಷದ ಮಗನಿಗೆ ನೀಡಿದರು. ಸ್ವಲ್ಪ ರುಚಿ ನೋಡಿದಾಗ ಅದರಲ್ಲಿ ಆಲ್ಕೋಹಾಲ್ ಇರುವುದು ಪತ್ತೆಯಾಗಿ ಅದನ್ನು ಹಿಂತಿರುಗಿಸಲಾಯಿತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ನಾನು ನನ್ನ ಮಗನ ಜೊತೆ ಕೌಂಟರ್ ಗೆ ಹೋಗಿ ಕೇಳಿದಾಗ ಮದ್ಯ ಮಾರಾಟದ ಪರಿಚಾರಕರು ವೈಟರ್ ಗೆ ನೀನು ಲಿಟ್ ಗೆ ಆರ್ಡರ್ ಕೊಟ್ಟಿದ್ದರಿಂದ ಆಲ್ಕೋಹಾಲ್ ಕಳುಹಿಸಿದೆ ಎಂದು ಹೇಳುವುದು ಕೇಳಿಸಿತು. ಇದು ಚಾನ್ಸೆರಿ ಪೆವಿಲಿಯನ್ ನಂತಹ ಹೊಟೇಲ್ ನಲ್ಲಿ ನಡೆದ ಘಟನೆ ಎಂದು ಸುಪ್ರಿಯಾ ಪೋಸ್ಟ್ ನಲ್ಲಿ ಹಾಕಿಕೊಂಡಿದ್ದಾರೆ. ಲಾಂಗ್ ಐಲ್ಯಾಂಡ್ ಐಸ್ ಟೀಯನ್ನು ಸಂಕ್ಷಿಪ್ತವಾಗಿ ಲಿಟ್ ಎಂದು ಕರೆಯಲಾಗುತ್ತಿದ್ದು ಕಾಕ್ ಟೈಲ್ ಆಗಿದ್ದು ಅದರಲ್ಲಿ ಆಲ್ಕೋಹಾಲ್ ಅಂಶವಿರುತ್ತದೆ.

ಹೊಟೇಲ್ ನ ಮ್ಯಾನೇಜರ್ ಸುಪ್ರಿಯಾ ಕುಟುಂಬದವರಿಗೆ ಕ್ಷಮೆ ಕೇಳಿದರು, ಶುಲ್ಕ ನೀಡುವ ವಿಚಾರದಲ್ಲಿ ಕೂಡ ಹೊಟೇಲ್ ವಿನಾಯಿತಿ ನೀಡಿತು. ಈ ವಿಚಾರದ ಬಗ್ಗೆ ಹೊಟೇಲ್ ಆಂತರಿಕೆ ತನಿಖೆ ನಡೆಸಿ ಸಂಬಂಧಪಟ್ಟವರಿಗೆ ನೊಟೀಸ್ ಕಳುಹಿಸಲಾಗುವುದು ಎಂದು ಹೇಳಿದೆ.

ಕೆಲವು ವರ್ಷಗಳ ಹಿಂದೆ ಸುಪ್ರಿಯಾಗೆ ಇದೇ ಹೊಟೇಲ್ ನಲ್ಲಿ ಈ ರೀತಿಯ ಅನುಭವವಾಗಿತ್ತಂತೆ. ನಮ್ಮ ತಾಯಿಯನ್ನು ಮಧ್ಯಾಹ್ನದ ಊಟಕ್ಕೆ ಕರೆದುಕೊಂಡು ಹೋಗಿದ್ದ ಸಮಯದಲ್ಲಿ ವೆಜ್ ಬಿರಿಯಾನಿಗೆ ಆರ್ಡರ್ ಮಾಡಿದ್ದೆವು. ತಾಯಿ ನಾನ್ ವೆಜ್ ಆಹಾರ ತಿನ್ನುವುದಿಲ್ಲ. ಆದರೆ ಹೊಟೇಲ್ ನವರು ಮಟನ್ ಬಿರಿಯಾನಿ ತಂದು ಕೊಟ್ಟಿದ್ದರು. ನಮ್ಮ ತಾಯಿ ಕೆಲವು ತುತ್ತುಗಳನ್ನು ತಿಂದ ಮೇಲೆ ಅದರಲ್ಲಿ ಮಾಂಸದ ತುಂಡುಗಳು ಕಂಡ ನಂತರ ಅದು ನಾನ್ ವೆಜ್ ಬಿರಿಯಾನಿ ಎಂದು ಗೊತ್ತಾಯಿತು ಎಂದು ಹೇಳಿದ್ದಾರೆ.

ಗ್ರಾಹಕ ವೇದಿಕೆಯಲ್ಲಿ ದೂರು ನೀಡುವ ಬಗ್ಗೆ ಸುಪ್ರಿಯಾ ಇನ್ನೂ ನಿರ್ಧರಿಸಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com