ಸೋಮವಾರ ಕಳೆದ ರಾತ್ರಿ ವಿಜಯ್ ಕುಮಾರ್ ಟಿಕೆಟ್ ಪಡೆಯದೆ ರೈಲು ಇಂಜಿನ ಬಳಿ ಇರುವ ಜನರಲ್ ಕೋಚ್ ಮೇಲೆ ಹತ್ತಿ ಕುಳಿತುಕೊಂಡಿದ್ದಾನೆ. ರೈಲು ಬಂಗಾರಪೇಟೆ ಮತ್ತು ಗುಡುಪಲ್ಲಿ ದಾಟಿ ಕೊಪ್ಪಂಗೆ ಪ್ರಯಾಣಿಸುತ್ತಿತ್ತು. ಈ ವೇಳೆ ವಿಜಯ್ ಕುಮಾರ್ ಗೆ ರೈಲಿನ ಮೇಲೆ ಅಳವಡಿಸಿದ್ದ ವಿದ್ಯುತ್ ಕಂಬಿ ತಗುಲಿ ಕೆಳಗೆ ಬಿದ್ದಿದ್ದಾನೆ ಇದನ್ನು ಗಮನಿಸಿದ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ದಾರೆ.