ಬೆಂಗಳೂರು: ಬಿಸಿ ಬಿಸಿ ಸಾಂಬಾರಿಗೆ ಬಿದ್ದಿದ್ದ 4 ವರ್ಷದ ಬಾಲಕ ಬುಧವಾರ ಸಾವನ್ನಪ್ಪಿದ್ದಾನೆ, ಬೆಂಗಳೂರಿನ ಜಯನಗರ 4ನೇ ಟಿ ಬ್ಲಾಕ್ ನಲ್ಲಿರುವ ಬಾಲಕ ಮನೆಯಲ್ಲಿ ಈ ದುರಂತ ಸಂಭವಿಸಿದೆ.
ವಿವೇಕ್ ಮೃತ ಬಾಲಕ. ವಿವೇಕ್ ತಾಯಿ ಆಶಾ ಮತ್ತ ತಂದೆ ಸುರೇಶ್ ದಿನಗೂಲಿ ಕಾರ್ಮಿಕರು. ಈ ಸಂಬಂಧ ತಿಲಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,
ಬುಧವಾರ ಸಂಜೆ ಆಶಾ ಮತ್ತು ಆಕೆಯ ಮಗ ವಿವೇಕ್ ಊಟಕ್ಕೆ ಕುಳಿತಿದ್ದರು. ಸುರೇಶ್ ಹೊರಗೆ ಹೋಗಿದ್ದ, ಇದೇ ವೇಳೆ ಯಾರೋ ಬಾಗಿಲು ಬಡಿದ ಸದ್ದಾಯಿತು. ಯಾರೆಂದು ನೋಡಲು ಆಶಾ ಹೊರಟಾಗ, ವಿವೇಕ್ ಕುದಿಯುತ್ತಿದ್ದ ಸಾರಿನ ಪಾತ್ರೆ ಮೈಮೇಲೆ ಸುರಿದುಕೊಂಡಿದ್ದಾನೆ.
ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವಿವೇಕ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದಯೊಯ್ದಿದ್ದಾರೆ,. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಶಿವಮೊಗ್ಗ ಮೂಲದ ದಂಪತಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು.