ಬೆಂಗಳೂರು: ಭಾರೀ ಮಳೆ, ಪ್ರವಾಹ ಪರಿಸ್ಥಿತಿಯಿಂದ ನಲುಗಿರುವ ಕಾವೇರಿ ತವರೂರು ಕೊಡಗು ಹಾಗೂ ಕರಾವಳಿ ಭಾಗಗಳಿಗೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ಶುಕ್ರವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಸಿದ ಕುಮಾರಸ್ವಾಮಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಪ್ರವಾಹ ಪೀಡಿತರ ರಕ್ಷಣಾ ಕಾರ್ಯಾಚರಣೆ ಕುರಿತಂತೆ ಅಧಿಕಾರಿಗಳಿಂಡ ಮಾಹಿತಿ ಪಡೆದಿರುವ ಕುಮಾರಸ್ವಾಮಿ ತಾವೇ ಖುದ್ದು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇನ್ನು ಭಾನುವಾರ ಸಹ ಮುಖ್ಯಮಂತ್ರಿಗಳು ನಂಜನಗೂಡು, ಕಬಿನಿ ಪ್ರದೇಶಕ್ಕೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ ಎನ್ನಲಾಗಿದೆ.
CM HD Kumaraswamy will visit Kodagu tomorrow and review the relief operations in the district. He will chair a high level meeting regarding the relief operation tomorrow at 10.30 am at Krishna, his home office and then leave for Kodagu district. #KarnatakaRains
ಕೊಡಗಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ,ಸಂತ್ರಸ್ತರಿಗೆ ಗಂಜಿ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗುತ್ತಿದೆ. ಮುಳುಗಡೆಯಾಗುತ್ತಿರುವ ಪ್ರದೇಶದ ಜನರನ್ನು ರಕ್ಷಣಾ ಪಡೆಗಳು ಹೆಲಿಕಾಪ್ಟರ್ ಮೂಲಕ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ.
He will visit rain affected areas in Nanjangood and Kabini on Sunday, 19th of August. He has also directed Kodagu district in-charge minister Sa. Ra. Mahesh to get supply of relief materials from Mysuru. #KarnatakaRains #