ಕೊಡಗು: ಭೂಕುಸಿತದಿಂದ ಪಾರಾದರು, ಆದರೆ ಮತ್ತೆ ಜವರಾಯನಿಂದ ಬಚಾವ್ ಆಗಲೇ ಇಲ್ಲ!

ವರುಣನ ರುದ್ರ ನರ್ತನಕ್ಕೆ ಸಿಲುಕಿ ನಲುಗಿ ಹೋಗಿರುವ ಕೊಡಗಿನಲ್ಲಿ ಆಗಸ್ಟ್ 16 ರಂದು ಉಂಟಾದ ಭೂ ಕುಸಿತದ ವೇಳೆ ಮೂವರು ಪಾರಾಗಿದ್ದರು, ಆದರೆ ಕೆಲ ಗಂಟೆಗಳ ...
ಪವನ್ ಪುತ್ರಿ ಧನ್ಯ ಸಂಬಂಧಿಕರೊಂದಿಗೆ
ಪವನ್ ಪುತ್ರಿ ಧನ್ಯ ಸಂಬಂಧಿಕರೊಂದಿಗೆ
Updated on: 
ಮಡಿಕೇರಿ: ವರುಣನ ರುದ್ರ ನರ್ತನಕ್ಕೆ ಸಿಲುಕಿ ನಲುಗಿ ಹೋಗಿರುವ ಕೊಡಗಿನಲ್ಲಿ ಆಗಸ್ಟ್ 16 ರಂದು ಉಂಟಾದ ಭೂ ಕುಸಿತದ ವೇಳೆ ಮೂವರು ಪಾರಾಗಿದ್ದರು, ಆದರೆ ಕೆಲ ಗಂಟೆಗಳ ನಂತರ ಉಂಟಾದ ಮತ್ತೊಂದು ಭೂ ಕುಸಿತದಲ್ಲಿ ಜವರಾಯ ಅವರ ಪ್ರಾಣ ಪಕ್ಷಿ ಹೊತ್ತೊಯ್ದಿದ್ದಾನೆ.
ಯಶವಂತ್ , ವೆಂಕಟರಾಮನ್ ಮತ್ತು ಪವನ್ ಆಗಸ್ಟ್ 16 ರಂದು ಸಂಭವಿಸಿದ ಭಾರೀ ಭೂಕುಸಿತದಿಂದ ಪಾರಾಗಿದ್ದರು,  ಆದರೆ ಅದೇ ದಿನ ಯಶವಂತ್ ಮತ್ತು ವೆಂಕಟರಮಣ್ ಅವರ ಶವಗಳು ಸಿಕ್ಕವು.ಪವನ್ ನಾಪತ್ತೆಯಾಗಿರುವುದು ತಿಳಿದು ಬಂತು, ಆತ ಸತ್ತಿರುವ ಯಾವುದೇ ಅವಶೇಷಗಳು ಸಿಗಲಿಲ್ಲ, ಹಿಗಾಗಿ ಆತನ ಕುಟುಂಬಸ್ಥರು ಪವನ್ ಎಲ್ಲೋ ಸೇಫ್ ಆಗಿದ್ದಾನೆ ಎಂದು ನಂಬಿದ್ದರು, ಆದರೆ ಅವರ ನಂಬಿಕೆ ಸುಳ್ಳಾಗಿತ್ತು, ಬುಧವಾರ ಪ್ಲಾಸ್ಟಿಕ್ ಕವರ್ ಗಳಿಂದ ಸುತ್ತಿದ್ದ ಆತನ ದೇಹ ಮನೆಗೆ ತಲುಪಿತ್ತು.
ನಾನು ಮತ್ತು ನನ್ನ 4 ವರ್ಷದ ಮಗಳು ಧನ್ಯ ಶ್ರೀ ಅನಾಥರಾಗಿದ್ದೇವೆ, ಸ್ಥಳದಿಂದ ಹೋಗುವ ಮುನ್ನ ಆತ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ,ಈಗ ನಾವು ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ತಿಳಿಯದಾಗಿದೆ.ಪವನ್ ಪತ್ನಿ ಉಮಾವತಿ ಕಂಬನಿಗರೆದಿದ್ದಾರೆ. 
ಆಗಸ್ಟ್ 16 ರಂದು ಮುಂಜಾನೆ 3 ಗಂಟೆಗೆಜೋರಾದ ಶಬ್ದ ಕೇಳಿ ಬಂತು, ಜೀವಭಯದಿಂದ ನಾವು ಮನೆಯಿಂದ ಓಡಿ ಬಂದೆವು, ಕಟ್ಟೆಗಕೇರಿಯ ಮನೆಯಿಂದ ಹೊರಬಂದ ತಕ್ಷಣ ದೊಡ್ಡ ಮಟ್ಟದ ಭೂ ಕುಸಿತ ಉಂಟಾಯಿತು, ಶಬ್ದ ಕೇಳಿ ನೆರೆ ಹೊರೆ ಮನೆಯವರು ಹೊರಗೆ ಓಡಿ ಬಂದರು. ಪವನ್ ಉಮಾ ಮತ್ತು ಅವರ  ಮಗಳುಭೂ ಕುಸಿತದಿಂದ ಆಗ ಬಚವಾಗಿದ್ದರು. ಆದರೆ ಅವರ ಹಣೆ ಬರಹ ಬೇರೇಯೆ ಬರೆದಿದೆ ಎಂಬುದು ಅವರಿಗೆ ತಿಳಿದರಿಲಿಲ್ಲ, 
ಯಶವಂತ್, ನವೀನ್, ಮನೋಹರ್, ವೆಂತಟರಾಮನ್, ಪವನ್ ಎಲ್ಲರೂ ಅಕ್ಕಪಕ್ಕದ ಮನೆವರಾಗಿದ್ದರು. ಆಗಸ್ಟ್ 16 ರಂದು ಬೆಳಗ್ಗೆ 6 ಗಂಟೆ ವೇಳೆಗೆ ಹಾನಿಯಾಗಿರುವ ತಮ್ಮ ಮನೆಗಳಿಗೆ ವಾಪಸ್ ಬಂದಿದ್ದರು ಎಂದು ಕಟಗೇರಿ ಗ್ರಾಮಜದ ರಾಜೇಶ್ ಹೇಳಿದ್ದಾರೆ. ಭೂಕುಸಿತದಿಂದ ನಾಶವಾಗಿದ್ದ ತಮ್ಮ ಮನೆಗಳನ್ನು ನೋಡುತ್ತಾ ನಿಂತಿದ್ದರು. ಈ ವೇಳೆ ಸಂಭವಿಸಿದ ಮತ್ತೊಂದು ಭೂ ಕುಸಿತ ಅವರನ್ನು ಮಣ್ಣೊಳಗೆ ಎಳೆದೊಯ್ತು. 
.ಯತೀಶ್, ನವೀನ್, ಮನೋಹರ್ ತೀವ್ರ ಗಾಯಗಳಾಗಿ ಸಾವಿನಿಂದ ತಪ್ಪಿಸಿಕೊಂಡರು, ಆಧರೆ ಯಶವಂತ್ , ವೆಂಕಟ್ ರಾವ್ ಮತ್ತು ಪವನ್ ಸಾವಿನಿಂದ ಬಚಾವಾಗಲು ಸಾಧ್ಯವಾಗಲಿಲ್ಲ. 
ಎನ್ ಡಿ ಆರ್ ಎಫ್ ನ 30 ಮಂದಿ ಸದಸ್ಯರ ತಂಡ ಪವನ್ ದೇಹವನ್ನು ಪತ್ತೆ ಹಚ್ಚಿದೆ. ಇನ್ನೂ ಕೂಡ ಹೊಸದಾಗಿ ಭೂ ಕುಸಿತವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com