ಗೌಡ ಎಂದುಕೊಂಡು ಒಕ್ಕಲಿಗ ಸಮಾಜಕ್ಕೆ ಅವಮಾನ ಮಾಡುತ್ತಿದ್ದೀರಿ: ಜೆಡಿಎಸ್ ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಕ್ಲಾಸ್!

ಜೆಡಿಎಸ್ ಬೆಂಬಲಿಗರು ಫೇಸ್ ಬುಕ್ ಅಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ಇಡೀ ಒಕ್ಕಲಿಗ ಸಮಾಜ ತಲೆ ತಗ್ಗಿಸುವಂತದ್ದಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ...
ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Updated on
ಬೆಂಗಳೂರು: ಜೆಡಿಎಸ್ ಬೆಂಬಲಿಗರು ಫೇಸ್ ಬುಕ್ ಅಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆಇಡೀ ಒಕ್ಕಲಿಗ ಸಮಾಜ ತಲೆ ತಗ್ಗಿಸುವಂತದ್ದಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತ ಪಡಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಜೆಡಿಎಸ್ ಬೆಂಬಲಿಗರು ಹೊಲಸು ಪದಗಳನ್ನು ಬಳಕೆ ಮಾಡುತ್ತಾರೆ. ಇಂತಹ ಪದಗಳನ್ನು ಮುಂದೆ ಬಳಕೆ ಮಾಡಬೇಡಿ ಎಂದು ಸಲಹೆ ನಿಡಿದ್ದಾರೆ.
ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿ ವೇಳೆ ನಡೆದ ಘಟನೆ ಬಗ್ಗೆ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ, 
ಬಾಯಿ ತೆಗೆದ್ರೆ ಅಕ್ಕ-ಅಮ್ಮ ಎಂದು ಹೊಲಸು ಶಬ್ದಗಳನ್ನು ಫೇಸ್ ಬುಕ್ ಅಲ್ಲಿ ಬೈಯ್ಯ ಬೇಡಿ. ಆ ರೀತಿ ಬೈಯಲೂ ನಮಗೂ ಬರುತ್ತೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಈ ರೀತಿ ಪದಗಳನ್ನು ಮಾಡುತ್ತಾರೆ. ಬೇರೆ ಅವರ ಬಗ್ಗೆ ಈ ರೀತಿಯ ಕೆಟ್ಟ ಪದಗಳನ್ನು ಬಳಕೆ ಮಾಡೋದನ್ನ ನಿಲ್ಲಿಸಿ, ನಿಮ್ಮ ಭಾಷೆಯ ಮೇಲೆ ಹಿಡಿತವಿರಲಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com