ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರಿಗೆ ಬೈಕ್ ಮಾರಾಟ ಮಾಡಿದ್ದ ವ್ಯಕ್ತಿ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಿಗೆ ಬೈಕ್ ಮಾರಾಟ ಮಾಡಿದ್ದ ವ್ಯಕ್ತಿಯನ್ನು ಎಸ್ಐಟಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ...
ಗೌರಿ ಲಂಕೇಶ್
ಗೌರಿ ಲಂಕೇಶ್
Updated on: 
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಿಗೆ ಬೈಕ್ ಮಾರಾಟ ಮಾಡಿದ್ದ ವ್ಯಕ್ತಿಯನ್ನು ಎಸ್ಐಟಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಸಾಗರ್ ಲಾಖೆ (30) ಬಂಧಿಕ ಆರೋಪಿಯಾಗಿದ್ದಾನೆ. ಈತ ಗಣೇಶಪುರ ನಿವಾಸಿಯಾಗಿದ್ದು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ನೆರವು ನೀಡಿದ ಆರೋಪದ ಮೇರೆಗೆ ಬಂಧನಕ್ಕೊಳಪಡಿಸಲಾಗಿದೆ. 
ಈತ ಆರೋಪಿ ಭರತ ಕುರಣೆ ಹೋಟೆಲ್'ನ ಉದ್ಯಾನವನ ನಿರ್ವಹಣೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ಭರತ ಕುರಣೆ ಜತೆಗಿನ ದೂರವಾಣಿ ಸಂಭಾಣೆ ಆಧಾರದ ಮೇಲೆ ಈ ಸಾಗರನನ್ನು ಎಸ್ಐಟಿ ವಶಕ್ಕೆ ಪಡೆದುು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಬೈಕ್ ಖರೀದಿ ಮಾಡಲು ಸನಾತನ ಸಂಸ್ಥೆಯೇ ಹಣವನ್ನು ನೀಡಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಎಸ್ಐಟಿ ಅಧಿಕಾರಿಗಳು, ಸಿಬಿಐ ಹಾಗೂ ಎಟಿಎಸ್ ಅಧಿಕಾರಿ ತೀವ್ರ ತನಿಖೆ ಆರಂಭಿಸಿದ್ದಾರೆ. 

ಪ್ರಮುಖ ಆರೋಪಿಗಳಾಗಿರುವ ಅಮೋಲ್ ಕಾಳೆ ಎರಡು ತಂಡವನ್ನು ರಚನೆ ಮಾಡಿ ಗೌರಿ ಲಂಕೇಶ್ ಅವರನ್ನು ಗುರಿ ಮಾಡಿದ್ದರು. ಒಂದು ತಂಡ ಸುಧನ್ವ ಗೊಂಡಾಲ್ಕರ್ ಮತ್ತು ಶರದ್ ಖಲಸ್ಕರ್ ಆಗಿದ್ದರೆ, ಮತ್ತೊಂದು ತಂಡ ಗಣೇಸ್ ಮಿಸ್ಕಿನ್ ಮತ್ತು ಪರಶುರಾಮ್ ವಾಗ್ಮೋರೆಯಾಗಿತ್ತು ಎಂದು ತಿಳಿದುಬಂದಿದೆ. 

ಸೆ.4ರಂದೇ ಹತ್ಯೆಗೆ ಸಂಚು ರೂಪಿಸಿದ್ದರು ಹಂತಕರು
ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಅಮೋಲ್ ಕಾಳೆಗೆ ಸಂಬಂಧಿಸಿದ ಡೈರಿಯೊಂದು ದೊರಕಿದ್ದು, ಡೈರಿಯಲ್ಲಿ ಸೆ.4 ರಂದೇ ಗೌರಿ ಹತ್ಯೆಗೆ ಸಂಚು ರೂಪಿಸಿರುವುದು ದಾಖಲಾಗಿರುವುದಾಗಿ ತಿಳಿದುಬಂದಿದೆ. 

ಸೆ.4ರಂದೇ ಗೌರಿ ಹತ್ಯೆ ಮಾಡಲು ಮೊದಲ ತಂಡ ಗೌರಿ ಮನೆಯತ್ತ ಧಾವಿಸಿತ್ತು. ಗೌರಿಯವರು ಮನೆಯೊಳಗಿದ್ದರಿಂದ ಹತ್ಯೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಮೊದಲ ತಂಡದ ಮೇಲೆ ಭರವಸೆಯನ್ನು ಕೈಬಿಟ್ಟ ಕಾಳೆ ಎರಡನೇ ತಂಡವನ್ನು ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com