ಬೆಳ್ಳಂದೂರು ಕೆರೆ ರಕ್ಷಿಸುವಲ್ಲಿ ವಿಫಲ: ರಾಜ್ಯಕ್ಕೆ ಎನ್'ಜಿಟಿ ತರಾಟೆ, ರೂ.75 ಕೋಟಿ ದಂಡ

ಜಲಮಾಲೀನ್ಯದ ಕಾರಣಕ್ಕೆ ಇಡೀ ದೇಶದಲ್ಲಿ ಸುದ್ದಿ ಮಾಡಿರುವ ಬೆಂಗಳೂರಿನ ಬೆಳ್ಳಂದೂರು ಕರೆ ರಕ್ಷಿಸುವಲ್ಲಿ ರಾಜ್ಯವಿಫಲವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಲಮಾಲೀನ್ಯದ ಕಾರಣಕ್ಕೆ ಇಡೀ ದೇಶದಲ್ಲಿ ಸುದ್ದಿ ಮಾಡಿರುವ ಬೆಂಗಳೂರಿನ ಬೆಳ್ಳಂದೂರು ಕರೆ ರಕ್ಷಿಸುವಲ್ಲಿ ರಾಜ್ಯವಿಫಲವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಕೆರೆ ಶುದ್ಧಿ ಮಾಡಲು ವಿಫಲವಾಗಿದ್ದಕ್ಕೆ ರೂ. 75 ಕೋಟಿ ದಂಡ ವಿಧಿಸಿದೆ. 
ಕೆರೆ ಶುದ್ಧಿ ಮಾಡಲು ವಿಫಲವಾಗಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ರೂ.50 ಕೋಟಿ ಹಾಗೂ ಬಿಬಿಎಂಪಿಗೆ ರೂ.25 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂಗ್ರಹಿಸಿದ ದಂಡದ ಹಣವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಟ್ಟುವಂತೆ ಎನ್'ಜಿಟಿ ಸೂಚಿಸಿದ್ದು, ಈ ಹಣವನ್ನು ಪರಿಸರ ಪುನರುಜ್ಜೀವನಕ್ಕೆ ಬಳಸಿಕೊಳ್ಳುವಂತೆ ತಿಳಿಸಿದೆ. 
ಇದೇ ವೇಳೆ ಕೆರೆಯ ಶುದ್ಧೀಕರಣ ಉದ್ದೇಶಕ್ಕಾಗಿ ಎಸ್ಕೋ ಬ್ಯಾಂಕ್ ಖಾತೆ ತೆರೆದೆ ರೂ.500 ಕೋಟಿ ಠೇವಣಿ ಇಡಬೇಕು. ಈ ಹಣವನ್ನು ಕೆರೆಯ ಶುದ್ಧೀಕರಣದ ಉದ್ಿದೇಶಕ್ಕೆ ಬಳಸಬೇಕೆಂದೂ ಆದೇಶಿಸಿದೆ. ತನ್ನ ಆದೇಶ ಪಾಲನೆಗೆ ಸರ್ಕಾರ ವಿಫಲವಾದರೆ ಇನ್ನೂ ರೂ.100 ಕೋಟಿ ಕಟ್ಟಬೇಕು ಎಂದು ನ್ಯಾಯಾಧೀಕರಣ ಎಚ್ಚರಿಸಿದೆ. 
ಕರೆ ಮಲಿನಗೊಂಡು ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಧೀಕರಣ, ಬೆಳ್ಳಂದೂರು ಕೆರೆಯ ರಕ್ಷಣೆ ಮತ್ತು ಪುನರುಜ್ಜೀವನದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. ಶುದ್ಧೀಕರಿಸದ ಒಳಚರಂಡಿ ನೀರು ಕೆರೆಗೆ ಇನ್ನೂ ಬರುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿತು. 
ಬೆಳ್ಳಂದೂರು ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿಯ ಬಗ್ಗೆಯೂ ಪ್ರಸ್ತಾಪಿಸಿದ ನ್ಯಾಯಾಧೀಕರಣ, ರಾಜ್ಯಸರ್ಕಾರ ಹಾಗೂ ಬಿಬಿಎಂಪಿ ಕೆರೆ ಹಾಗೂ ರಾಜಕಾಲುವೆಂ ಅತಿಕ್ರಮಣ ತಡೆಯಲು ವಿಫಲವಾಗಿದೆ. ಕೆರ ಜಲಾನಯನ ಪ್ರದೇಶದ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಬೇಕೆಂದು ಆದೇಶಿಸಿತು. 
ತನ್ನ ಆದೇಶ ಪಾಲನೆ ಆಗುವುದನ್ನು ನೋಡಿಕೊಳ್ಳುವ ಸಲುವಾಗಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ, ಐಐಎಸ್ಸಿಯ ನಿವೃತ್ತ ಪ್ರಾಧ್ಯಾಪಕ ಟಿ.ವಿ.ರಾಚಂದ್ರನ್ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಓರ್ವ ಸದಸ್ಯರನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಿದ ನ್ಯಾಯಾಧೀಕರಣ, ಬೆಳ್ಳಂದೂರು ಕೆರೆಯ ಪುರುತ್ಥಾನಕ್ಕೆ 1 ತಿಂಗಳಲ್ಲಿ ಕಾಲಮಿತಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿತು. 
ಬೆಳ್ಳಂದೂರು ಕೆರೆ ಮಾಲೀನ್ಯಕ್ಕೆ ಸಂಬಂಧಿಸಿದಂತೆ ವೆಬ್ ಸೈಟ್ ಒಂದನ್ನು ರೂಪಿಸಬೇಕು. ಅದರ ಮೂಲಕ ಜನರು ಸಲಹೆ ಹಾಗೂ ದೂರು ನೀಡಬಹುದು ಎಂದು ತಿಳಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com