ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಯೋಜನೆ ನಿರ್ಮಾಣ ಮಾಡುತ್ತಿರುವ ಪ್ರಮುಖ ಉದ್ದೇಶವೇ ವಿದ್ಯುತ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರು ಪೂರೈಕೆಂ ಎರಡೂ ಕಾರಣಗಳನ್ನೂ ಯೋಜನೆಗೆ ನೀಡಲಾಗಿದ್ದರೂ, ಕುಡಿಯುವ ಉದ್ದೇಶಕ್ಕೆ ಈ ಯೋಜನೆಯ ಅಗತ್ಯವಿಲ್ಲ. ಕಾವೇರಿ ನ್ಯಾಯಾಧೀಕರಣವು ಕುಡಿಯುವ ಉದ್ದೇಶಕ್ಕೆ 18 ಟಿಎಂಸಿ ನೀರು ಹಂಚಿಕೆ ಮಾಡಿದೆ. ಇದರಲ್ಲಿ 4.5 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬೆಂಗಳೂರು ನಗರದ ಜನತೆಗೆ ಪೂರೈಕೆ ಮಾಡಬಹುದು. ಆದರೆ, ಈ ನೀರು ಪೂರೈಕೆ ಮಾಡಲು ಮೇಕೆಂದಾಟು ಯೋಜನೆಯೇ ಆಗತ್ಯವಿಲ್ಲ. ಬೇರೆ ಕಡೆಯಿಂದಲೂ ನೀರು ಪಂಪ್ ಮಾಡಿ ಪೂರೈಸಬಹುದು ಎಂದು ಹೇಳಿದರು.