ಕಲಬುರ್ಗಿಯಲ್ಲಿ ಭಾರೀ ಮಳೆ: ಅಪಾರ ಬೆಳೆ ಹಾನಿ, ಜನ ಜೀವನ ಅಸ್ತವ್ಯಸ್ಥ

ಗುರುವಾರ ರಾತ್ರಿ ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು ಅಪಾರ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ರಸ್ತೆ ತುಂಬಾ ನೀರು ಹರಿದಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.
ಕಲಬುರ್ಗಿಯಲ್ಲಿ ಭಾರೀ ಮಳೆ
ಕಲಬುರ್ಗಿಯಲ್ಲಿ ಭಾರೀ ಮಳೆ
Updated on: 
ಕಲಬುರ್ಗಿ: ಗುರುವಾರ ರಾತ್ರಿ ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು ಅಪಾರ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ರಸ್ತೆ ತುಂಬಾ ನೀರು ಹರಿದಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ.
ಕಲಬುರ್ಗಿ ಜಿಲ್ಲೆಯಾದ್ಯಂತ ವಿವಿಧೆಡೆ ಮಳೆಯಾಗಿದ್ದು ಕಲಬುರ್ಗಿ ನಗರ ಸಂಪೂರ್ಣ ಜಲಾವೃತವಾಗಿದೆ. ಅಂಗಡಿ ಮುಂಗಟ್ಟನ್ನು ತೆರೆಯಲಾಗದೆ, ಮನೆಯಿಂದ ಹೊರಬರಲಾಗದೆ ಜನರು ಕಂಗಾಲಾಗಿದ್ದಾರೆ.
ಮಳೆಗೆ ತೊಗರಿ ಬೆಳೆ ಅಪಾರ ಹಾನಿಗೀಡಾಗಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.
ರಾತ್ರಿ ಹನ್ನೊಂದರಿಂದಲೂ ಮಳೆ ಬಿಟ್ಟು ಬಿಡದೆ ಸುರಿಯುತ್ತಿದ್ದು ಒಟ್ಟಾರೆ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ನಡುವೆ ಉತ್ತರ ಕ್ರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com