ಕೆಎ57-294 ನೋಂದಣಿ ಸಂಖ್ಯೆಯ 223 D ನಂಬರ್ನ ಬಿಎಂಟಿಸಿ ಬಸ್, ದೊಡ್ಡಬಸ್ತಿಯಿಂದ ಮಾರ್ಕೆಟ್ ಕಡೆ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ರಾಜ ರಾಜೇಶ್ವರಿನಗರದ ಗೋಪಾಲನ್ ಆರ್ಕೇಡ್ ಬಳಿ ಬಸ್ ನ ಬ್ರೇಕ್ ಫೇಲ್ ಆಗಿ, ಫುಟ್ಪಾತ್ ಮೇಲೆ ಹತ್ತಿದೆ. ಈ ವೇಳೆ ಎದುರಿಗೆ ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ಕಾಂಪೌಂಡ್ಗೆ ಗುದ್ದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮತ್ತಿಬ್ಬರು ಪಾದಚಾರಿಗಳು ಗಾಯಗೊಂಡಿದ್ದಾರೆ.