ಚಿಕ್ಕಮಗಳೂರಿನಿಂದ ಕಾಣೆಯಾಗಿದ್ದ ಕೇರಳ ಯುವಕ ಗರ್ಲ್ ಫ್ರೆಂಡ್ ಜೊತೆ ಮಹಾರಾಷ್ಟ್ರದಲ್ಲಿ ಪತ್ತೆ!

ಕಳೆದ ತಿಂಗಳು ಚಿಕ್ಕಮಗಳೂರಿನಿಂದ ನಿಗೂಢವಾಗಿ ಕಾಣೆಯಾಗಿದ್ದ ಕೇರಳ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ..
ಸಂದೀಪ್ ಎಸ್ ಕೃಷ್ಣ
ಸಂದೀಪ್ ಎಸ್ ಕೃಷ್ಣ
Updated on: 
ಶಿವಮೊಗ್ಗ: ಕಳೆದ ತಿಂಗಳು ಚಿಕ್ಕಮಗಳೂರಿನಿಂದ ನಿಗೂಢವಾಗಿ ಕಾಣೆಯಾಗಿದ್ದ ಕೇರಳ ಯುವಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 
ಮಹಾರಾಷ್ಟ್ರದ ಥಾಣೆಯಲ್ಲಿ ತನ್ನ ಗರ್ಲ್ ಫ್ರೆಂಡ್ ಜೊತೆಗಿದ್ದ ಆತನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಾಜಿಕೋಡ್ ನಲ್ಲಿ ಖಾಸಗಿ ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದ ಸಂದೀಪ್ ಎಸ್ ಕೃಷ್ಣ ತನ್ನ ಸ್ನೇಹಿತೆ ಅಶ್ವಿನಿ ಜೊತೆ ಬುಧವಾರ ರಾತ್ರಿ ಪತ್ತೆಯಾಗಿದ್ದಾರೆ.
ಕೋಜಿಕೋಡ್ ನಲ್ಲಿ ಇಬ್ಬರ ಕುಟುಂಬದವರು ಪ್ರತ್ಯೇಕ ವಾಗಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ತಮ್ಮ ಹಿಂದಿನ ಜೀವನದಿಂದ ಮುಕ್ತಿ ಬೇಕಾಗಿದ್ದು, ಕುಟುಂಬದವರನ್ನು ತೊರೆದು ಹೋಗಬೇಕೆಂದು ನಿರ್ಧರಿಸಿದ್ದೆ, ಹೀಗಾಗಿ  ತಮ್ಮ ಕುಟುಂಬಸ್ಥರು ನಾನು ಸತ್ತಿರಬಹುದೆಂದು ನಂಬಲಿ ಎಂದು ಈ ರೀತಿಯ ನಾಟಕವಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ಗೆಳತಿ ಜೊತೆ ಹೊಸ ಬದುಕು ಆರಂಭಿಸಲು ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ.
ಚಿಕ್ಕಮಗಳೂರಿನಿಂದ ಹೊರಟ ನಂತರ ತನ್ನ ಮೊಬೈಲ್ ಅನ್ನು ಬದಲಾಯಿಸಿದ ಸಂದೀಪ್ ಮುಂಬಯಿಗೆ ತೆರಳಿದ್ದ., ಅಲ್ಲಿಗೆ ಹೋದ ನಂತರ ಆಶ್ವಿನಿಯನ್ನು ಸಂಪರ್ಕಿಸಿದ್ದ. ಆತನ ನಾಪತ್ತೆ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿರುವ ವಿಷಯವನ್ನು ಆತನಿಗೆ ಆಕೆ ತಿಳಿಸಿದ್ದಳು. ಅದರಿಂದ  ಸಂದೀಪ್ ಪಂಜಾಬ್ ನ ಲುಧಿಯಾನಾ ಗೆ ತೆರಳಲು ನಿರ್ಧರಿಸಿದ್ದ. ಪಂಜಾಬ್ ಗೆ ತೆರಳುವ ಮುನ್ನ ಆತ ಮುಂಬಯಿಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಸಂದೀಪ್ ನಾಪತ್ತೆಯಾದ 15 ದಿನಕ್ಕೆ ಅಶ್ವಿನಿಯನ್ನು ಮುಂಬಯಿಗೆ ಬರಲು ತಿಳಿಸಿದ್ದ, ನಂತರ ಅಶ್ವಿನಿ ಕೂಜ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ಮೊಬೈಲ್ ಟ್ರಾಪ್ ಮಾಡಿದ್ದರು. ಫೋನ್ ರೆಕಾರ್ಡ್ ನಿಂದಾಗಿ ಇಬ್ಬರನ್ನು ಪೊಲೀಸರು ಮುಂಬಯಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಡಿಸೆಂಬರ್ 12 ರಂದು ಅಶ್ವಿನಿ ಮುಂಬಯಿಗೆ ಬಂದಿದ್ದಳು, ಇಬ್ಬರು 15 ದಿನಕ್ಕಾಗಿ ಸಣ್ಣ ಲಾಡ್ಡ್ ವೊಂದರಲ್ಲಿ ರೂಂ ಮಾಡಿದ್ದರು.  ಅಶ್ವಿನಿ ತನ್ನ ಮನೆಯಿಂದ ಬರುವಾಗ ಸ್ವಲ್ಪ ಹಣ ಮತ್ತು ಚಿನ್ನಾಭರಣ ತಂದಿದ್ದಳು, ಅಶ್ವಿನಿ ಮತ್ತು ಸಂದೀಪ್ ಇಬ್ಬರನ್ನು ಕೇರಳಕ್ಕೆ ಕರೆ ತರಲಾಗಿದೆ,
ನವೆಂಬರ್ 25 ರಂದು ಸಂದೀಪ್ ಚಿಕ್ಕಮಗಳೂರಿನ ಹರಿಹರಪುರದಿಂದ ನಾಪತ್ತೆಯಾಗಿದ್ದ. ಆತನ ಬೈಕ್ ತುಂಗಾ ನದಿಯ ದಡದ ಮೇಲಿತ್ತು, ಪಕ್ಕದಲ್ಲಿ ಆತನ ಬ್ಯಾಡ್ಜ್ ಮತ್ತು ಐಡಿ ಕಾರ್ಡ್ ಪತ್ತೆಯಾಗಿತ್ತು,.ಸಂದೀಪ್ ಗಾಗಿ ತುಂಗಾ ನದಿಯಲ್ಲಿ ಹುಡುಕಾಟ ನಜಡೆಸಲಾಗಿತ್ತು. ಸುಳ್ಳು ನಾಟಕವಾಡಿದ್ದ ಸಂದೀಪ್ ನಿಂದ ಹಣ ವಸೂಲಿ ಮಾಡಲು ಚಿಕ್ಕಮಗಳೂರು ಪೊಲೀಸರು ನಿರ್ಧರಿಸಿದ್ದಾರೆ, ಆತನ ಹುಡುಕಾಟಕ್ಕಾಗಿ ಖರ್ಚು ಮಾಡಿದ 4 ಲಕ್ಷ ರು. ಹಣವನ್ನು ನೀಡುವಂತೆ ಕೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com