ಅಮೆರಿಕನ್ನಡಿಗರು ತಯಾರಿಸಿದ ಕನ್ನಡ ಸಿನಿಮಾ ವೇದಾಂತಿ

ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ತಂಡವೊಂದು ಕನ್ನಡ ಸಿನಿಮಾವೊಂದನ್ನು ಸಂಪೂರ್ಣವಾಗಿ....
ವೇದಾಂತಿ ಚಿತ್ರತಂಡ
ವೇದಾಂತಿ ಚಿತ್ರತಂಡ
Updated on: 
ಬೆಂಗಳೂರು: ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ತಂಡವೊಂದು ಕನ್ನಡ ಸಿನಿಮಾವೊಂದನ್ನು ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರೀಕರಿಸಿದೆ.
ಟೆಕ್ಕಿಯಾಗಿರುವ ರಾಹುಲ್ ರಾಮ್ ಇದರ ಸೂತ್ರದಾರನಾಗಿದ್ದು ಅವರು ಸ್ವಯಂ ಕಲಿತ ಚಲನಚಿತ್ರ ತಯಾರಕರು. ವೇದಾಂತಿ ಎಂದು ಸಿನಿಮಾಕ್ಕೆ ಹೆಸರಿಡಲಾಗಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.
ಎಂಜಿನಿಯರಿಂಗ್ ವೃತ್ತಿ ನನ್ನ ಜೀವನೋಪಾಯಕ್ಕೆ. ಆದರೆ ಕಥೆ ಹೇಳುವುದು, ಸಿನಿಮಾ ಮಾಡುವುದು ನನ್ನ ಆಸಕ್ತಿ ಎನ್ನುತ್ತಾರೆ ಕ್ಯಾಲಿಫೋರ್ನಿಯಾದಲ್ಲಿ ಎಂಜಿನಿಯರಿಂಗ್ ವೃತ್ತಿ ಮಾಡುತ್ತಿರುವ ರಾಹುಲ್ ರಾಮ್.
ಕೊಲೆ ರಹಸ್ಯವನ್ನು ಹೊಂದಿರುವ 70 ನಿಮಿಷಗಳ ಸಿನಿಮಾ ಸಂಪೂರ್ಣವಾಗಿ ಕ್ಯಾಲಿಫೋರ್ನಿಯಾದಲ್ಲಿ ಚಿತ್ರೀಕರಣಗೊಂಡಿದೆ. ಛಾಯಾಗ್ರಾಹಕರು ಹೊರತುಪಡಿಸಿ ಸಿನಿಮಾದಲ್ಲಿನ ಇತರರೆಲ್ಲರೂ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರು. ಇಲ್ಲಿ ಬಹುತೇಕರು ಸಿನಿಮಾ ಕ್ಷೇತ್ರಕ್ಕೆ ಹೊಸಬರು. ಸ್ವತಃ ರಾಹುಲ್ ಅವರೇ ಎಲ್ಲರನ್ನೂ ಕರೆತಂದು ಸಿನಿಮಾ ಮಾಡಿದ್ದು. ಹಲವು ವರ್ಷಗಳ ಹಿಂದೆ ಚಿತ್ರಕಥೆ ಸಿದ್ದವಾಗಿದ್ದರೂ ಕೂಡ ಅಮೆರಿಕಾದಲ್ಲಿ ನಾಟಕ ಪ್ರದರ್ಶನವೊಂದರಲ್ಲಿ ನಟರನ್ನು ಭೇಟಿ ಮಾಡಿದ ನಂತರ ಸಿನಿಮಾಕ್ಕೆ ಕಲಾವಿದರನ್ನು ಒಗ್ಗೂಡಿಸಲು ಸಹಾಯವಾಗಿದ್ದು.
ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಭಾರತ ಹಾಗೂ ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಬೆಂಗಳೂರು ಮೂಲದ ಟೆಕ್ಕಿ ಗಣೇಶ್ ಶರ್ಮ ತ್ಯಾಗಳ್ಳಿ ಚಿತ್ರದಲ್ಲಿ ಪತ್ತೇದಾರಿ ಹರೀಶ್ ವೇದಾಂತಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಭಾರತದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆಯೇ ಎಂದು ಕೇಳಿದಾಗ, ನಮಗೆ ಭಾರತದಲ್ಲಿ ಥಿಯೇಟರ್ ಗಳ ಲಭ್ಯತೆ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಬೇರೆ ಮಾಧ್ಯಮಗಳ ಮೂಲಕ ಭಾರತದ ವೀಕ್ಷಕರಿಗೂ ತಲುಪಿಸಲು ಪ್ರಯತ್ನಿಸುತ್ತೇವೆ. ಚಿತ್ರ ನಿರ್ಮಾಣಕ್ಕೆ ಸುಬ್ಬು ಪದ್ಮನಾಭ್ ಮತ್ತು ರೋಹಿತ್ ರಮೇಶ್ ಬಂಡವಾಳ ಹೂಡಿದ್ದಾರಂತೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com