

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಂದಗೆಡಿಸುತ್ತಿರುವ ಅಕ್ರಮ ಫ್ಲೆಕ್ಸ್ ಹೋರ್ಡಿಂಗ್ಸ್ ತೆರವುಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿರುವ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮಾಯಿಗೌಡ ಸಲ್ಲಿಸಿದ್ದ ಸಾರ್ವನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರ ಸ್ಥಾನದಲ್ಲಿದ್ದ ಹೆಚ್. ಜಿ. ರಮೇಶ್ ಹಾಗೂ ಪಿ.ಎಸ್. ದಿನೇಶ್ ಕುಮಾರ್ ಅವರನ್ನೊಳಗೊಂಡ ಪೀಠ, ಇದೇನೂ ನಾಗರಿಕ ಸಮಾಜನಾ, ನಿವೇನೂ ಮಾಡ್ತಿದ್ದೀರಾ ಅಂತಾ ಬಿಬಿಎಂಪಿಗೆ ಪ್ರಶ್ನೆಗಳ ಸುರಿಮಳೆಗರೆದಿದೆ.
ನಿಗದಿತ ಅವಧಿಯೊಳಗೆ ಪ್ಲೆಕ್ಸ್ , ಹೋರ್ಡಿಂಗ್ ತೆರವುಗೊಳಿಸದಿದ್ದಲ್ಲಿ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಫೆಬ್ರುವರಿ 17ಕ್ಕೆ ಮುಂದೂಡಿದೆ.
ರಾಜ್ಯಸರ್ಕಾರ ಜಾಹಿರಾತು ನೀತಿ ಜಾರಿಗೊಳಿಸಿ, ಜಾಹಿರಾತನ್ನು ನಿಯಂತ್ರಿಸಿದೆ. ಮಹಾನಗರ ಪಾಲಿಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದು, 600ರಿಂದ 700 ಹೋರ್ಡಿಂಗ್ ಗಳನ್ನು ತೆರವುಗೊಳಿಸಿದೆ. ಎಂದು ಬಿಬಿಎಂಪಿ ವರ ವಕೀಲ ಶ್ರೀನಿಧಿ ವಾದಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಅರ್ಜಿದಾರರ ಪರ ವಕೀಲ ಜಿ. ಆರ್. ಮೋಹನ್, ಮಾತನಾಡಿ,ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋರ್ಡಿಂಗ್ ತೆರವುಗೊಳಿಸುವಂತೆ ಬಿಬಿಎಂಪಿ. ನಗರ ಯೋಜನಾ ಇಲಾಖೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದರು.