ಬೆಂಗಳೂರು: ಟ್ರಾಫಿಕ್ ಮಾಹಿತಿ ತಿಳಿಸಲು ಬರುತ್ತಿದೆ ವಿಎಂಎಸ್ ವ್ಯವಸ್ಥೆ

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಯೇ ದೊಡ್ಡ ನೋವಾಗಿ ಪರಿಣಮಿಸಿದ್ದು, ಸಂಚಾರ ದಟ್ಟಣೆ, ಬಸ್ಸಿಗಾಗಿ ಕಾಯುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಸಮಯ ಉಳಿತಾಯ ಮಾಡಲು, ಯೋಜಿತ ಸಂಚಾರಕ್ಕಾಗಿ ವಿಎಂಎಸ್ (ವೇರಿಯೇಬಲ್ ಮೆಸೇಜ್ ಸಿಗ್ನೇಜ್) ಡಿಸ್ಪ್ಲೇ ವ್ಯವಸ್ಥೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಯೇ ದೊಡ್ಡ ನೋವಾಗಿ ಪರಿಣಮಿಸಿದ್ದು, ಸಂಚಾರ ದಟ್ಟಣೆ, ಬಸ್ಸಿಗಾಗಿ ಕಾಯುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಸಮಯ ಉಳಿತಾಯ ಮಾಡಲು, ಯೋಜಿತ ಸಂಚಾರಕ್ಕಾಗಿ ವಿಎಂಎಸ್ (ವೇರಿಯೇಬಲ್ ಮೆಸೇಜ್ ಸಿಗ್ನೇಜ್) ಡಿಸ್ಪ್ಲೇ ವ್ಯವಸ್ಥೆಯನ್ನು ಅಳವಡಿಸಲು ಸರ್ಕಾರ ಮುಂದಾಗಿದೆ. 
ಪ್ರಮುಖ ರಸ್ತೆಗಳಲ್ಲಿ ಸಂಚಾರ ಕುರಿತ ಪ್ರಸ್ತುತದ ಪರಿಸ್ಥಿತಿಯನ್ನು ಈ ವಿಎಂಎಸ್ ವ್ಯವಸ್ಥೆ ತಿಳಿಸಲಾಗಿದ್ದು, ವಿಎಂಎಸ್ ಅಳವಡಿಸಲು ನಗರ ಪೊಲೀಸರು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಪರಾಧ ಮತ್ತು ಸಂಚಾರಿ ವಿಭಾಗ ಪೊಲೀಸ್ ಉಪ ಆಯುಕ್ತ ವಿಕ್ರಮ್ ವಿ ಅಮಾಠೆಯವರು, ಮೊದಲ ಹಂತವಾಗಿ ವಿಎಂಎಸ್ ವ್ಯವಸ್ಥೆಯನ್ನು ನಗರ ಮೂರು ವಿವಿಧ ಭಾಗಗಳಲ್ಲಿ ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ. 
5*2.5 ಮೀಟರ್ ಎಲೆಕ್ಟ್ರಾನಿಕ್ ವಿಎಂಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಈ ವ್ಯವಸ್ಥೆಯ ಮೂಲಕ ರಸ್ತೆಯ ಕಾಮಗಾರಿ ಕಾರ್ಯಗಳು ಅಥವಾ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳು ಯಾವುವು ಎಂಬುದು ಮತ್ತು ಹವಾಮಾನ ವಾತಾವರಣವನ್ನು ನೀಡಲಾಗುತ್ತದೆ. ಇದರ ಮಾಹಿತಿ ಮೂಲಕ ಜನರು ತಮ್ಮ ಕೆಲಸ ಕಾರ್ಯಗಳ ಯೋಜನೆಗಳನ್ನು ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಮೈಸೂರು ನಗರದಲ್ಲಿ ಈಗಾಗಲೇ ವಿಎಂಎಸ್ ವ್ಯವಸ್ಥೆಗಳಿದ್ದು, ವಿಎಂಎಸ್ ವ್ಯವಸ್ಥೆಯನ್ನು ಹೊಂದಿದ ಮೊದಲ ನಗರವೆಂದು ಖ್ಯಾತಿ ಪಡೆದಿದೆ ಎಂದು ತಿಳಿಸಿದ್ದಾರೆ. 
ಮೈಸೂರಿನಲ್ಲಿ ಅಳವಡಿಸಲಾಗಿರುವ ವಿಎಂಎಸ್ ವ್ಯವಸ್ಥೆಯಲ್ಲಿ ಗೂಗಲ್ ನಕ್ಷೆಯಿದ್ದು, ನಗರದ ರಸ್ತೆಗಳ ನಕ್ಷೆಯೊಂದಿಗೆ, ವಾಹನ ಸಂಚಾರ ಕುರಿತ ಮಾಹಿತಿ ಸಂಚಾರಿ ದಟ್ಟಣೆ, ಯೂ ಟರ್ನ್, ಸ್ಪೀಡ್ ಬ್ರೇಕರ್ ಮತ್ತು ಇತರೆ ಮಾಹಿತಿಗಳನ್ನು ನೀಡಲಾಗುತ್ತಿದೆ. ಮೈಸೂರಿನಂತೆಯೇ ಬೆಂಗಳೂರು ನಗರದಲ್ಲೂ ವಿಎಂಎಸ್ ವ್ಯವಸ್ಥೆ ಅಳವಡಿಸಲು ಆದೇಶ ನೀಡಲಾಗಿತದ್ದು, ರೂ.1 ಕೋಟಿ ವೆಚ್ಚದಲ್ಲಿ ಎರಡು ತಿಂಗಳೊಲಗಾಗಿ ನಗರ ಮೂರು ವಿವಿಧ ಸ್ಥಳಗಳಲ್ಲಿ ವಿಎಂಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ವ್ಯವಸ್ಥೆಯು ಸಂಚಾರಿ ಪೊಲೀಸರ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರಮುಖವಾಗಿ ವಿಐಪಿಗಳು ಬಂದಂತಹ ಸಂದರ್ಭದಲ್ಲಿ ಹೆಚ್ಚು ಸಹಾಯ ಮಾಡುತ್ತವೆಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com